*ವಿಟಿಯು ಕುಲಸಚಿವರಾಗಿ ಪ್ರಸಾದ ರಾಂಪುರೆ ಅಧಿಕಾರ ಸ್ವೀಕಾರ*


ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರಸಾದ ರಾಂಪುರೆ ನೇಮಕಗೊಂಡಿದ್ದಾರೆ.
ವಿಟಿಯು ನೂತನ ಕುಲಸಚಿವರಾಗಿ ಸೋಮವಾರ ಪ್ರಸಾದ ರಾಂಪುರೆ ಅಧಿಕಾರ ಸ್ವೀಕರಿಸಿದರು. ಕೆಎಲ್ಇ ಸಂಸ್ಥೆಯ ಚಿಕ್ಕೋಡಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ ರಾಂಪುರೆ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ವಿಟಿಯು ಕುಲಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಡಾ. ರಾಂಪುರೆ ಅವರು ಕೆ.ಎಲ್.ಇ. ಡಾ. ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜು, ಬೆಳಗಾವಿ ಯಂತ್ರಶಾಸ್ತ್ರ ವಿಭಾಗದಲ್ಲಿ 17 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಅವರು ನಾಲ್ಕು ವರ್ಷಗಳ ಕಾಲ ಚಿಕ್ಕೋಡಿಯ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನ ಯಂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಅವರು ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜು, ಚಿಕ್ಕೋಡಿಯ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಕೆ.ಎಲ್.ಇ. ಸಂಸ್ಥೆಯ ಅಜೀವ ಸದಸ್ಯರಾಗಿರುವ ಡಾ. ರಾಂಪುರೆ ಅವರು ಮೂರು ವರ್ಷಗಳ ಕಾಲ ವಿ.ತಾ.ವಿ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.




