Kannada NewsLatestNational

*ಭೀಕರ ಅಪಘಾತದಲ್ಲಿ ಹೊತ್ತಿಕೊಂಡ ಬೆಂಕಿ; ಮಗು ಸೇರಿ 8 ಜನ ಸಜೀವ ದಹನ*

ಪ್ರಗತಿವಾಹಿನಿ ಸುದ್ದಿ; ಲಖನೌ: ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲೇ 8 ಜನರು ಸಜೀವ ದಹನಗೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಅಪಘಾತದ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ರಸ್ತೆ ಮಧ್ಯೆಯೇ ವಾಹನಗಳು ಹೊತ್ತಿ ಉರಿದಿವೆ. ಕಾರು ಸೆಂಟರ್ ಲಾಕ್ ಆಗಿತ್ತು. ಅಲ್ಲದೇ ಕಾರಿನ ಬಾಗಿಲು ಜಾಮ್ ಆಗಿದ್ದರಿಂದ ಕಾರಿನಲ್ಲಿದವರಿಗೆ ಹೊರಬರಲು ಸಾಧ್ಯವಾಗಿಲ್ಲ. ಮಗು ಸೇರಿ 8 ಜನರು ಸಜೀವದಹನವಾಗಿದ್ದಾರೆ.

Home add -Advt

ವೇಗವಾಗಿ ಬಂದ ಕಾರು ಎದುರಿನ ಲೇನ್ ಗೆ ತಿರುಗಿ ಟ್ರಕ್ ಗೆ ಡಿಕಿ ಹೊಡೆದಿದೆ. ಮೃತರು ಉತ್ತರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.


Related Articles

Back to top button