Karnataka News

*ನೀರಿನ ಟ್ಯಾಂಕ್ ನಲ್ಲಿ ಮಗುವಿನ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಮನೆಯ ನೀರಿನ ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ.

Home add -Advt

ಮನು ಮತ್ತು ಅರ್ಚನಾ ದಂಪತಿಯ ಕಂದಮ್ಮ ಮನೆಯ ಮೇಲಿರುವ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ನಿನ್ನೆ ಸೋಮವಾರ ಬೆಳಿಗ್ಗೆಯಿಂದ ಮಗು ನಾಪತ್ತೆಯಾಗಿತ್ತು. ಎಷ್ಟು ಹುಡುಕಾಡಿದರೂ ಮಗುವಿನ ಸುಳಿವಿರಲಿಲ್ಲ. ಈಗ ಮನೆಯ ನೀರಿನ ಟ್ಯಾಂಕ್ ನಲ್ಲಿ ಮಗು ಮೃತದೇಹ ಪತ್ತೆಯಾಗಿದೆ.

ಮೃತ ಮಗುವಿನ ತಾತ ಇಗ್ಗಲೂರಪ್ಪ ಎಂಬಾತ ತನ್ನ ಭಾಮೈದ ವರ್ಷದ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ. ಮದುವೆಗೂ ಮುನ್ನ ಅವರ ಪ್ರೇಮ ಪ್ರಕರಣ ಪೊಲೀಸ್ ಠಾನೆ ಮೆಟ್ಟಿಲೇರಿತ್ತು. ಇಬ್ಬರೂ ಮೇಜರ್ ಇರುವ ಕಾರಣ ಮದುವೆಯಾಗಿತ್ತು. ಒಂದು ವರ್ಷದಿಂದ ದಂಪತಿ ಇಲ್ಲಿಯೇ ವಾಸವಾಗಿದ್ದರು. ಭಾಮೈದ ಕರೆ ಮಾಡಿ ಮಗುವನ್ನು ಯಾರೋ ಸಿಂಟೆಕ್ಸ್ ಟ್ಯಾಂಕ್ ಗೆ ಹಾಕಿದ್ದಾರೆ ಎಂದು ಕರೆ ಮಾಡಿದ್ದ. ಯಾರು ಈ ಕೃತ್ಯವೆಸಗಿದ್ದಾರೆಂದು ಗೊತ್ತಿಲ್ಲ ಎಂದಿದ್ದಾರೆ.

ಸೂರ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಿದ್ದಾರೆ.

Related Articles

Back to top button