Belagavi NewsBelgaum NewsKannada NewsKarnataka NewsNational
*ಹಿಂಡಲಗಾ ಜೈಲಿನ ಬಳಿ ಗಸ್ತು ಹೆಚ್ಚಿಸುತ್ತೇವೆ: ಪೊಲೀಸ್ ಆಯುಕ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ನಿಷೇಧಿತ ವಸ್ತುಗಳು ಎಸೆದಿರುವ ಪ್ರಕರಣದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಗ್ಗೆ ವಿಡಿಯೋ ನೋಡಿ ತನಿಖೆ ಮಾಡುತ್ತೇವೆ. ಕ್ಯಾಮೆರಾ ಯಾವುದು, ದಿನಾಂಕ ಯಾವುದು ಮೊದಲು ಗೊತ್ತಾಗಲಿ. ಜೈಲಿನಲ್ಲಿ ಮೊಬೈಲ್, ಡ್ರಗ್ಸ್ ಹಾಕಿದಾರೆ ಅಂತಾ ಮಾಧ್ಯಮದಲ್ಲಿ ಬಂದಿದೆ. ಹೀಗಾಗಿ ಅದರ ಬಗ್ಗೆ ವಿಚಾರಣೆ ಮಾಡಲು ಬಂದಿದ್ದೇವೆ. ವಿಡಿಯೋ ದಿನಾಂಕ ಮತ್ತು ಟೈಮಿಂಗ್ ಚೆಕ್ ಮಾಡುತ್ತೇವೆ ಎಂದರು.
ಕೆಐಎಸ್‌ಎಫ್ ಸಿಬ್ಬಂದಿ ಇದನ್ನು ನೋಡಿಕೊಳ್ಳಬೇಕು. ಗ್ರಾಮೀಣ ಠಾಣೆ ಪೊಲೀಸರು ಮತ್ತು ಕೆಎಸ್‌ಐಎಫ್ ಸಿಬ್ಬಂದಿ ಗಸ್ತು ಹೆಚ್ಚಿಸುತ್ತೇವೆ. ನಮ್ಮಕಡೆಯಿಂದ ಭದ್ರತೆ ಕೊಡಬೇಕು ಅದನ್ನು ಮಾಡುತ್ತೇವೆ ಎಂದು ಕಮಿಷನರ್ ತಿಳಿಸಿದರು.




