ಪ್ರಗತಿ ವಾಹಿನಿ ಸುದ್ದಿ, ಕೋಲ್ಕತ್ತಾ
ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹಾಟ್ ಅವತಾರಕ್ಕೆ ಜನ ಅಕ್ಷರಶಃ ಅವಕ್ಕಾಗಿದ್ದಾರೆ.
ಆಗಾಗ ತಮ್ಮ ಗ್ಲಾಮರ್ ಮೂಲಕ ಸುದ್ದಿಯಲ್ಲಿರುವ ನುಸ್ರತ್ ಜಹಾನ್ ಈ ಬಾರಿ ತಮ್ಮ ಎದೆಯ ಮೇಲೆ ಟ್ಯಾಟೂ ಬಿಡಿಸಿಕೊಂಡು ಬೆಡ್‍ರೂಂನಲ್ಲಿ ಫೋಸ್ ನೀಡಿದ್ದಾರೆ.
ಚಿತ್ರ ನಟಿಯೂ ಆಗಿರುವ ನುಸ್ರುತ್ ಜಹಾನ್, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಗ್ಲಾಮರ್ ಮತ್ತು ಸೌಂದರ್ಯದಿಂದ ಚರ್ಚೆಯಲ್ಲಿರುವ ಭಾರತದ ಮಟ್ಟಿಗೆ ಅಪರೂಪದ ಸಂಸದೆ ಅವರು.
ನುಸ್ರುತ್ ಜಹಾನ್ ಇತ್ತೀಚಿನ ತಮ್ಮ ಫೋಟೊ ಶೂಟ್‍ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದು, ಅದರಲ್ಲಿ ಅವರು ಹಾಸಿಗೆಯ ಮೇಲೆ ಕುಳಿತು ಫೇಸ್ಟ್ರಿಗಳನ್ನು ಆಸ್ವಾದಿಸುತ್ತಿರುವುದನ್ನು ಕಾಣಬಹುದು.
ಅಲ್ಲದೇ ತಮ್ಮ ಶರ್ಟನ್ನು ಕೆಳಗೆ ಜಾರಿಸುವ ಮೂಲಕ ಎದೆಯ ಮೇಲಿನ ಟ್ಯಾಟೂವನ್ನು ತೋರಿಸಿದ್ದಾರೆ.
ನುಸ್ರುತ್ ಅವರ ಈ ಹಾಟ್ ಲುಕ್ ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ಬೋಲ್ಡ್ ಲುಕ್ ಫೋಸಿಗೆ ಬಹಳಷ್ಟು ಜನ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಟಿಎಂಸಿ ಸಂಸದೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಬಹಳಷ್ಟು ನೆಗೆಟಿವ್ ಕಮೆಂಟ್‍ಗಳು ಸಹ ಬರುತ್ತವೆ. ಆದರೆ ಇದ್ಯಾವುದರ ಬಗ್ಗೆಯೂ ನುಸ್ರುತ್ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮಿಷ್ಟದಂತೆ ಅವರು ಇರುತ್ತಾರೆ.
ಸಚಿವ ಎಸ್. ಅಂಗಾರ ಆಸ್ಪತ್ರೆಗೆ ದಾಖಲು
https://pragati.taskdun.com/minister-s-angara-sufferd-from-dengue/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ