
ಪ್ರಗತಿವಾಹಿನಿ ಸುದ್ದಿ: ಮುಮ್ತಾಜ್ ಅಲಿ ಅವರ ಬಿಎಂಡಬ್ಲೂ ಕಾರ್ ಮಂಗಳೂರಿನ ಕುಳೂರು ಸೇತುವೆ ಮೇಲೆ ಪತ್ತೆ ಆಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಕಾರು ಆಕ್ಸಿಡೆಂಟ್ ಅಥವಾ ಬೇರೆ ದುರ್ಘಟನೆ ಆಗಿರೋ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ ಎಂದರು. ಈಗಾಗ್ಲೆ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮತ್ತು ಕುಟುಂಬಸ್ಥರು ಭೇಟಿ ನೀಡಿದ್ದಾರೆ. ಶೀಘ್ರ ಮಾಹಿತಿ ನೀಡುವುದಾಗಿ ಪರಮೇಶ್ವರ್ ಹೇಳಿದರು.
ಮತ್ತೊಂದೆಡೆ, ಮಂಗಳೂರು ಕಮಿಷನರ್ ಈ ಬಗ್ಗೆ ಅನುಪಮ್ ಅಗರ್ ವಾಲ್ ಪ್ರತಿಕ್ರಿಯೆ ನೀಡಿದ್ದು, ಕೇಸ್ ತನಿಖೆ ಬಗ್ಗೆ ವಿವರಣೆ ನೀಡಿದ್ದಾರೆ. ಮುಮ್ತಾಜ್ ಅಲಿ ಅವರ ಕಾರು ಕೂಳೂರು ಬ್ರಿಡ್ಜ್ ಬಳಿ ಪತ್ತೆಯಾಗಿದೆ. ಮುಮ್ತಾಜ್ ಅಲಿಯವರು ಬ್ರಿಡ್ಜ್ ಮೇಲಿಂದ ಜಿಗಿದಿರುವ ಸಾಧ್ಯತೆ ಇದೆ. ಈಜು ತಜ್ಞರು ಸೇರಿದಂತೆ ಅನೇಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಮಂಗಳೂರಿನ ಕೂಳೂರು ಬ್ರಿಡ್ಜ್ ಮೇಲೆ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕೆಎ19 ಎಂಜಿ0004 ಸಂಖ್ಯೆಯ BMW X5 ಕಾರು ಪತ್ತೆ ಆಗಿದೆ. ಸಾಯುತ್ತೇನೆ ಅಂತಾ ಹೇಳಿ ಮುಮ್ತಾಜ್ ಅಲಿ ಮನೆಯಿಂದ ತೆರಳಿದ್ದರು ಎನ್ನಲಾಗಿದೆ.ಎಸ್ಡಿಆರ್ಎಫ್, ಎನ್ ಡಿಆರ್ಎಫ್ ಅಗ್ನಿಶಾಮಕ ಸಿಬ್ಬಂದಿಯಿಂದ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ