Kannada NewsKarnataka NewsLatest

ವಾಟ್ಸಪ್ ಮೆಸೇಜ್: ಬೆಳಗಾವಿಯಲ್ಲಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ವಿವಿಧ ಧರ್ಮಗಳ ಮತ್ತು ಭಾಷಿಕರ ಮಧ್ಯದಲ್ಲಿ ಪ್ರಚೋಧನಕಾರಿ ವಾಟ್ಸಆ್ಯಪ್ ಸಂದೇಶಗಳನ್ನು ರವಾನಿಸಿದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಹಾಗೂ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಬ್ಬರ ವಿರುದ್ಧ, ಹೀಗೆ 02 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ತನಿಖೆ ಮುಂದುವರೆಸಲಾಗಿದೆ.

Home add -Advt

ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸಆ್ಯಫ್, ಪೇಸಬುಕ್, ಟ್ವಿಟರ್ ಇತ್ಯಾದಿಗಳಲ್ಲಿ ಯಾವುದೇ ಅವಹೇಳನಕಾರಿ, ಪ್ರಚೋಧನಕಾರಿ ಸಂದೇಶಗಳನ್ನು ಭಿತ್ತರಿಸಿದಲ್ಲಿ ಮತ್ತು ಬಂದ ಸಂದೇಶಗಳನ್ನು ಬೇರೆಯವರಿಗೆ ರವಾನಿಸಿದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಬೆಳಗಾವಿ ನಗರದ ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವಾಗುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.

ಹರ್ಷ ಕೊಲೆಗೆ ಸಿಎಂ ಬೊಮ್ಮಾಯಿ ಬಿಚ್ಚಿಟ್ಟ ಕಾರಣ ಗೊತ್ತೇ?

Related Articles

Back to top button