Kannada NewsKarnataka NewsLatest
*ಪತ್ನಿ ಕೊಲೆಗೈದು ಶವವನ್ನು ಸುಟ್ಟುಹಾಕುವಾಗ ತಗುಲಿದ ಬೆಂಕಿ: ಪತಿ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಯ ಕತ್ತು ಹಿಸುಕಿ ಆಕೆಯನ್ನು ಕೊಲೆಗೈದು, ಶವವನ್ನು ಸುಟ್ಟು ಹಾಕುತ್ತಿದ್ದಾಗ ಬೆಂಕಿ ತಗುಲಿ ಆತನೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸುನಿತಾ ಪತಿಯಿಂದ ಕೊಲೆಯಾದ ಮಹಿಳೆ. ಲಿಂಗರಾಜ್ ಪತ್ನಿಯನ್ನೇ ಕೊಂದ ಪತಿ. ಪತ್ನಿ ಸುನಿತಾ ಮೇಲೆ ಅನುಮಾನಗೊಂಡು ಆಕೆಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಸುಟ್ಟುಹಾಕಲು ಪ್ಲಾನ್ ಮಾಡಿದ್ದಾನೆ.
ಹೀಗೆ ಶವಕ್ಕೆ ಬೆಂಕಿ ಇಡುವಾಗ ಬೆಂಕಿಯ ಕೆನ್ನಾಲಿಗೆ ಲಿಂಗರಾಜ್ ಗೂ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಲಿಂಗರಾಜ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.