Latest

*ರೀಲ್ಸ್ ಪ್ರೇಮಿಗಾಗಿ ರೀಯಲ್ ಪತಿಯನ್ನೇ ಸ್ಲೋ ಪಾಯ್ಸನ್ ಕೊಟ್ಟು ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ರೀಲ್ಸ್ ಕ್ರೇಜಿನ ಹಿಂದೆ ಬಿದ್ದಿದ್ದ ಮಹಿಳೆಯೊಬ್ಬಳು ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾದ ಪ್ರೇಮಿಗಾಗಿ ತನ್ನ ಪತಿಯನ್ನು ಸ್ಲೋ ಪಾಯ್ಸನ್ ಕೊಟ್ಟು ಕೊಲೆ ಮಾಡಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಕೊಲೆ ಪ್ರಕರಣದಲ್ಲಿ ಕಾರ್ಕಳದ ಅಜೇಕಾರಿನ ಪ್ರತಿಮಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಪ್ರಿಯತಮ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರತಿಮಾ ಪತಿ ಬಾಲಕೃಷ್ಣ ಕೊಲೆಯಾದ ದುರ್ದೈವಿ.

ಬಾಲಕೃಷ್ಣ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು. ಪತಿ ಪೂರ್ತಿ ಗುಣಮುಖನಾದರೆ ತೊಂದರೆ ಎಂಬ ಕಾರಣಕ್ಕೆ ಬೆಡ್ ರೂಮ್ ನಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ರೀಲ್ಸ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಪ್ರತಿಮಾಳಿಗೆ ಇನ್ ಸ್ಟಾಗ್ರಾಂ ನಲ್ಲಿ ಉದ್ಯಮಿ ಪುತ್ರ ದಿಲೀಪ್ ಹೆಗ್ಡೆ ಪರಿಚಯನಾಗಿದ್ದ. ಇಬ್ಬರೂ ಸೇರಿ ಪಕ್ಕಾ ಪ್ಲಾನ್ ಮಾಡಿ ಬಾಲಕೃಷ್ಣನನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಪ್ರಿಯತಮ ತಂದುಕೊಟ್ಟಿದ್ದ ಸ್ಲೋ ಪಾಯ್ಸನ್ ನ್ನು ಊಟದಲ್ಲಿ ಸ್ವಲ್ಪ ಸ್ವಲ್ಪವೇ ಬೆರೆಸಿ ಕೊಟ್ಟು ಪ್ರತಿಮಾ, ಪತಿಯ ಆರೋಗ್ಯ ಕೆಡುವಂತೆ ಮಾಡಿದ್ದಳು. ಬಾಲಕೃಷ್ಣ ಆರೋಗ್ಯ ಪದೇ ಪದೇ ಹದಗೆಡುತ್ತಲೇ ಇತ್ತು. ತೀವ್ರವಾಗಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕೃಷ್ಣ ಬದುಕುವುದೇ ಕಷ್ಟ ಎಂದು ಹೇಳಿ ಡಿಸ್ಚಾರ್ಜ್ ಮಾಡಿ ವೈದ್ಯರು ಮನೆಗೆ ಕಳುಹಿಸಿದ್ದರು. ಸಾವಿನ ದವಡೆಯಲ್ಲಿದ್ದ ಬಾಲಕೃಷ್ನನ್ನು, ದಿಲೀಪ್ ಜೊತೆ ಸೇರಿ ಪ್ರತಿಮಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಪೊಲೀಸರ ವಿಚಾರಣೆ ವೇಳೆ ಪ್ರತಿಮಾ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ. ಪ್ರತಿಮಾಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆಯ ಪ್ರಿಯತಮ ದಿಲೀಪ್ ನನ್ನು ಪೊಲೀಸರು 5 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button