ತೈಲ ಬೆಲೆ ಏರಿಕೆ ಆತಂಕಕ್ಕೆ ಪರಿಹಾರ ಸಾಧ್ಯತೆಯ ಶುಭ ಸುದ್ದಿ

ಭಾರತಕ್ಕೆ ಕಚ್ಚಾ ತೈಲದ ಮೇಲೆ ಭಾರಿ ಡಿಸ್ಕೌಂಟ್ ನೀಡಲಿದೆಯೆ ರಷ್ಯಾ ?

.

 ಪ್ರಗತಿ ವಾಹಿನಿ ಸುದ್ದಿ ನವದೆಹಲಿ –  ರಷ್ಯಾ ಉಕ್ರೇನ್ ಯುದ್ಧ ಶುರುವಾದ ಮೇಲಿಂದ ಜಾಗತಿಕ ಮಟ್ಟದಲ್ಲಿ ಇರುವ ಬಹು ದೊಡ್ಡ ಭಯವೆಂದರೆ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಇಂಧನ ಬೆಲೆ ಏರಿಕೆಯದ್ದು.

ವಿಶ್ವದಲ್ಲಿ ರಷ್ಯಾ ಇಂಧನ ಪೂರೈಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು ಪ್ರಸ್ತುತ ಯುದ್ಧದ ವಿದ್ಯಮಾನದಿಂದ ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನೀಲದ ಬೆಲೆ ಗಗನಕ್ಕೇರುವ ಆತಂಕ ಮೂಡಿತ್ತು.

ಆದರೆ ಪ್ರಸಕ್ತ ಯುದ್ಧದಲ್ಲಿ ಭಾರತವು ರಷ್ಯಾ ಪರ ನಿಂತಿರುವುದರಿಂದ ಈ ವಿಚಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ. ರಷ್ಯಾ ಭಾರತಕ್ಕೆ ತನ್ನ ಪರವಾಗಿ ನಿಂತಿದ್ದರ ಫಲವಾಗಿ ಕಚ್ಛಾ ತೈಲದ ಮೇಲೆ ಶೇ. ೨೫-೩೦ರಷ್ಟು ರಿಯಾಯಿತಿ ನೀಡಲಿದೆ ಎಂದು ವರದಿಯಾಗಿದೆ.

ಭಾರತವು ತಚ್ಚಾ ತೈಲದ ಶೇ. ೭೦ರಷ್ಟು ಪ್ರಮಾಣವನ್ನು ಒಪೆಕ್ ದೇಶಗಳಿಂದ ಖರೀದಿಸುತ್ತದೆ. ಈ ನಡುವೆ ಕಳೆದ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ ರಷ್ಯಾದ ರೋಸ್ನೆಫ್ಟ್ ತೈಲ ಕಂಪನಿಯ ಜತೆ ಭಾರತದ ತೈಲ ಕಂಪನಿಗಳ ತೈಲ ಖರೀದಿಯ ಒಪ್ಪಂದವಾಗಿತ್ತು. ೨೦೨೨ರ ಕೊನೆಯವರೆಗೆ ೨ ಮಿಲಿಯನ್ ಟನ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಈ ಒಪ್ಪಂದದ ಮೇಲೆ ಖರೀದಿಸುವ ತೈಲಕ್ಕೆ ರಿಯಾಯಿತಿ ನೀಡಲು ರಷ್ಯಾ ಮುಂದಾಗಿದೆ ಎಂದು ವರದಿಯಾಗಿದೆ.

ಆದರೆ ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಸೊಸೈಟಿ ಆಫ್ ವರ್ಡ್ ಇಂಟರ್ ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಶನ್ (ಸ್ವಿಪ್ಟ್) ವ್ಯವಸ್ಥೆಯಿಂದ ರಷ್ಯಾವನ್ನು ದೂರವಿಟ್ಟಿರುವುದರಿಂದ ರಷ್ಯಾ ಬಳಿಯಿಂದ ತೈಲ ಖರೀದಿಸಲು ಹಣ ಕಾಸಿನ ವ್ಯವಹಾರ ನಡೆಸುವುದು ಭಾರಕ್ಕೆ ತೊಡಕಾಗಿದೆ. ಈ ಸಮಸ್ಯೆಗೆ ಪರಿಹಾರ ಸಿಕ್ಕಲ್ಲಿ ಭಾರತದಲ್ಲಿ ತೈಲ ದರ ಏರಿಕೆಯ ಸಮಸ್ಯೆಗೂ ಪರಿಹಾರ ಸಿಗಲಿದೆ ಎನ್ನಲಾಗಿದೆ.

ಉಕ್ರೇನ್‌ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಪಿಯೂಷ್ ಗೋಯಲ್ ಹೇಳಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button