ಬುರ್ಕಾದ ಕಸೂತಿಯಲ್ಲಿತ್ತು 18 ಲಕ್ಷದ ಚಿನ್ನ

ಮಹಿಳೆ ವಿರುದ್ಧ ದೂರು ದಾಖಲು

 

ಪ್ರಗತಿ ವಾಹಿನಿ ಸುದ್ದಿ ಹೈದರಾಬಾದ್ – ಅನ್ಯ ದೇಶಗಳಿಂದ ಬಂಗಾರ, ಡ್ರಗ್ಸ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಕ್ರಮವಾಗಿ ತರಲು ಜನ ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರು ದೇಹದೊಳಗೇ ಹುದುಗಿಸಿಕೊಂಡು ಬಂದ ಪ್ರಕರಣವೂ ನಡೆದಿದೆ.

ಆದರೆ ಮಂಗಳವಾರ ದುಬೈನಿಂದ ಹೈದರಾಬಾದ್‌ಗೆ ಬಂದ ಮಹಿಳೆ ಬಂಗಾರದ ಅಕ್ರಮ ಸಾಗಾಟಕ್ಕೆ ಮಾಡಿದ ಉಪಾಯ ಕಂಡು ಕಸ್ಟಮ್ಸ್ ಅಧಿಕಾರಿಗಳೇ ತಲೆದೂಗಿದ್ದಾರೆ.

ದುಬೈನಿಂದ ಹೈದರಾಬಾದ್‌ಗೆ ಬಂದ ಮಹಿಳೆಯ ಬುರ್ಕಾದಲ್ಲಿ ಅತ್ಯಾಕರ್ಷಕ ಕಸೂತಿ ಹೆಣೆಯಲಾಗಿತ್ತು. ಮೇಲ್ನೋಟಕ್ಕೆ ಬಿಳಿಯ ದಾರದಲ್ಲಿ ಕಸೂತಿ ಮಾಡಿದಂತೆ ಕಾಣುತ್ತಿತ್ತು. ಹಾಗಾಗಿ ಮೊದಲಿಗೆ ಯಾರಿಗೂ ಈ ಮಹಿಳೆ ಬಂಗಾರವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಳೆಂಬ ಅನುಮಾನ ಸಹ ಬರಲಿಲ್ಲ. ಆದರೆ ಕಸೂತಿ ಮಾಮೂಲಿಗಿಂತ ಸ್ವಲ್ಪ ದಪ್ಪದಾಗಿದ್ದರಿಂದ ಕೊನೇಯ ಕ್ಷಣದಲ್ಲಿ ಪರೀಕ್ಷಿಸಿ ನೋಡಿದಾಗ ಇಡೀ ಬುರ್ಕಾದ ಸುತ್ತ ಹೆಣೆದ ಕಸೂತಿ ಬಂಗಾರದ್ದಾಗಿದೆ.

ಬರೋಬ್ಬರಿ ೩೫೦ ಗ್ರಾಂ ತೂಕದ ಬಂಗಾರದ ಎಳೆಗಳ ಕಸೂತಿ ಇದಾಗಿದ್ದು ೧೮ ಲಕ್ಷ ರೂ. ಬೆಲೆ ಬಾಳುತ್ತದೆ. ಮಹಿಳೆ ವಿರುದ್ಧ ಅಕ್ರಮ ಚಿನ್ನ ಸಾಗಣೆ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರಂಗಕ್ಕೆ ಎಂಟ್ರಿಕೊಟ್ಟ ಜನಾರ್ಧನ ರೆಡ್ಡಿ ಪುತ್ರ

https://pragati.taskdun.com/film-and-entertainment/veena-malliknude-photoshootbollywood/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button