ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಬದುಕಿ ಉಳಿಯುವ ಯಾವುದೇ ಅವಕಾಶಗಳೇ ಇಲ್ಲದ ತಲೆಬುರುಡೆ ಹೊಂದಿರದ ಭ್ರೂಣ ಗರ್ಭದಲ್ಲಿಟ್ಟುಕೊಂಡ ನ್ಯಾನ್ಸಿ ಡೇವಿಸ್ ಎಂಬ ಮಹಿಳೆ ಬಲವಂತವಾಗಿ 2,250 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸಿದ್ದಾರೆ.
ಲೂಸಿಯಾನಾದಲ್ಲಿ ಆಕೆಯ ಆರೈಕೆಯನ್ನು ನಿರಾಕರಿಸುತ್ತಿದ್ದಂತೆ ಗರ್ಭಪಾತಕ್ಕಾಗಿ ಈ ರೀತಿ ಮಾಡಿಸಲಾಗಿದೆ. ಆಕೆಯನ್ನು ಅವಳ ತವರು ರಾಜ್ಯ ಲೂಸಿಯಾನಾದಿಂದ ನ್ಯೂಯಾರ್ಕ್ ವರೆಗೆ ಪ್ರಯಾಣಿಸುವ ಅನಿವಾರ್ಯತೆಗೆ ದೂಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಲೂಸಿಯಾನಾದ ಗರ್ಭಪಾತ ನಿಷೇಧ ಕಾನೂನುಗಳಿಂದ ಗೊಂದಲಕ್ಕೆ ಒಳಗಾಗಿದ್ದರಿಂದ ತಾವು ಗರ್ಭಪಾತ ಮಾಡಿಸಿಕೊಳ್ಳಲು ಹಿಂಜರಿದಿದ್ದಾಗಿ ತಿಳಿಸಿರುವ ನ್ಯಾನ್ಸಿ ಈ ರೀತಿಯಲ್ಲಿ ಗರ್ಭಪಾತಕ್ಕೊಳಗಾಗುವ ಅನಿವಾರ್ಯತೆಗೆ ದೂಡಲ್ಪಡಬೇಕಾಯಿತು ಎಂದಿದ್ದಾರೆ.
‘ಬ್ರಹ್ಮಾಸ್ತ್ರ’ ಉತ್ತಮ ಪ್ರಯತ್ನ, ಆದರೆ ಅಯಶಸ್ವಿ ಎಂದ ಎರಿಕಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ