*ಜಿಲೆಟಿನ್ ಕಡ್ಡಿ ಬಾಯಿಗೆ ಇಟ್ಟು ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೊಬ್ಬ ಜಿಲೆಟಿನ್ ಕಡ್ಡಿ ಬಾಯಿಗೆ ಇಟ್ಟು ಸ್ಫೋಟಿಸಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಿರಿಯಾ ಪಟ್ಟಣದ ಬಿಳಿಕೆರೆ ಗ್ರಾಮದ ಮೂಲದ ವ್ಯಕ್ತಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಕ್ಷಿತಾ (22) ಕೊಲೆಯಾದ ಮಹಿಳೆ. ಸಿದ್ದರಾಜು ಮಹಿಳೆಯನ್ನು ಹತ್ಯೆಗೈದ ಆರೋಪಿ.
ಹುಣಸೂರು ತಾಲೂಕಿನ ಗೆರಸನಹಳ್ಳಿ ರಕ್ಷಿತಾಳಿಗೆ ಕೇರಳ ಮೂಲದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಮದುವೆಯಾಗಿದ್ದರೂ ಸಿದ್ದರಾಜು ಎಂಬಾತನ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಳು. ಇದೀಗ ಸಿದ್ದರಾಜು ರಕ್ಷಿತಾಳನ್ನು ಲಾಡ್ಜ್ ವೊಂದಕ್ಕೆ ಕರೆದೊಯ್ದು ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡಿ ಸಾಯಿಸಿದ್ದಾನೆ. ಬಳಿಕ ಮೊಬೈಲ್ ಬ್ಲಾಸ್ಟ್ ಆಗಿ ರಕ್ಷಿತಾ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ಸದ್ಯ ಸಿದ್ದರಾಜುನನ್ನು ಪೊಲೀಸರು ಬಂಧಿಸಿದ್ದು, ರಕ್ಷಿತಾಳನ್ನು ಹತ್ಯೆಗೈಯ್ಯಲು ಕಾರಣವೇನು ಎಂಬುದು ತನಿಖೆಯಿಂದ ಬಯಲಾಗಬೇಕಿದೆ.