Kannada NewsKarnataka NewsLatest

*ಪತಿಯ ಮೇಲೆ ಹಲ್ಲೆ ನಡೆಸಿ ಪತ್ನಿಯನ್ನು ಎಳೆದೊಯ್ದು ಅತ್ಯಾಚಾರ*

ಐವರು ಆರೋಪಿಗಳು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ: ರಾಜ್ಯವೇ ಬೆಚ್ಚಿ ಬೀಳುವಂತಹ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದ ಬಳಿ ನಡೆದಿದೆ. ಪತಿಯ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪತ್ನಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

Home add -Advt

21 ವರ್ಷದ ಮಹಿಳೆ ಮೇಲೆ ಕಾಮುಕರು ಪತಿ ಎದುರಲ್ಲೇ ಅಟ್ಟಹಾಸ ಮೆರೆದಿದ್ದಾರೆ. ಸಂತ್ರಸ್ತ ಮಹಿಳೆ ಬೆಂಗಳೂರಿನ ಗೊರಗುಂಟೆಪಾಳ್ಯದವಳಾಗಿದ್ದಾಳೆ. ಸಂತ್ರಸ್ತೆಯ ಪತಿ ಗಂಗಾವತಿ ಮೂಲದವರು. ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಪತಿಯನ್ನು ನೋಡಲೆಂದು ಸಂತ್ರಸ್ತೆ ಗಂಗಾವತಿಗೆ ಬಂದಿದ್ದಳು.

ಸಂತ್ರಸ್ತೆಯ ಪತಿ ಫೆ.9ರಂದು ರಾತ್ರಿ ಗಂಗಾವತಿ ಬಸ್ ನಿಲ್ದಾಣದಲ್ಲಿ ಕೌಟುಂಬಿಕ ವಿಚಾರವಾಗಿ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ 6 ಜನರಿದ್ದ ಗ್ಯಾಂಗ್ ದಂಪತಿಯನ್ನು ಗಮನಿಸಿದೆ. ಜಗಳ ಜೋರಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಗ್ಯಾಂಗ್ ಪತಿಯನ್ನು ಥಳಿಸಿ ಮಹಿಳೆಗೆ ಸಹಾಯ ಮಾಡುವವರಂತೆ ನಾಟಕವಾಡಿದ್ದಾರೆ. ಮಹಿಳೆಯನ್ನು ಬಸ್ ನಿಲ್ದಾಣದ ಬಳಿಯ ಉದ್ಯಾನವನಕ್ಕೆ ಎಳೆದೊಯ್ದಿದ್ದಾರೆ.

6 ಜನರಲಿ ಓರ್ವ ಆರೋಪಿ ಲಿಂಗರಾಜ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು, ಉಳಿದವರು ಆತನ ಕೃತ್ಯಕ್ಕೆ ಸಹಕರಿಸಿದ್ದಾರೆ. ಕೃತ್ಯದ ಬಳಿಕ ಸಂತ್ರಸ್ತೆಯನ್ನು ಪಾರ್ಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಸಂತ್ರಸ್ತ ಗಂಗಾವತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಕಾರ್ಯಪ್ರವೃತ್ತರಾದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರವೆಸಗಿರುವ ಲಿಂಗರಾಜ್ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗಿದೆ.


Related Articles

Back to top button