
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬರು ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ವಿದ್ಯುತ್ ನಗರದಲ್ಲಿ ನಡೆದಿದೆ.
ಅಕ್ಷತಾ (30) ಮೃತ ಮಹಿಳೆ. ಅಕ್ಷತಾ ಮೂಲತ: ಭದ್ರಾವತಿ ತಾಲೂಕಿನ ಕೆರೆಬೀರನಹಳ್ಳಿ ಗ್ರಾಮದವರು. ಚಂದ್ರಗುತ್ತಿ ಗ್ರಾಮದ ಸಂತೋಷ್ ಎಂಬುವವರನ್ನು ವಿವಾಹವಾಗಿದ್ದರು. ಅಕ್ಷತಾ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು.
ಇಂದು ವಿದ್ಯುತ್ ನಗರದ ಮನೆಯಲ್ಲಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ