Belagavi NewsBelgaum NewsKannada NewsKarnataka News

*ಗೋಕಾಕ್ ಬಳಿ ನದಿಯಲ್ಲಿ ಕಾಲು ಜಾರಿ ಬಿದ್ದು ಬಾಲಕಿ ಸಾವು*

ಪ್ರಗತಿವಾಹಿನಿ ಸುದ್ದಿ: ಗೋಕಾಕ್ ಬಳಿ ಘಟಪ್ರಭಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Home add -Advt

ವೈಭವಿ ಪ್ರದೀಪ್‌ ಗಡಕರಿ (12) ಮೃತಪಟ್ಟ ಬಾಲಕಿ. ಇವಳು ಘಟಪ್ರಭಾ ನದಿಯಲ್ಲಿ ತನ್ನ ಚಿಕ್ಕಪ್ಪನೊಂದಿಗೆ ನದಿಗೆ ತೆರಳಿದ್ದಳು. ಸ್ನಾನವಾದ ನಂತರ ಬಟ್ಟೆ ತೊಳೆಯಲು ನದಿಗೆ ಇಳಿದಾಗ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.

ನುರಿತ ಈಜು ಪಟುಗಳು ಆಗಮಿಸಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button