Kannada NewsKarnataka NewsLatest

*ಹೃದಯಾಘಾತದಿಂದ ಬಸ್ ನಲ್ಲೇ ಸಾವನ್ನಪ್ಪಿದ ಪ್ರಯಾಣಿಕ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿಯೇ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ವೀರದೇವನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಚುಂಚನಹಳ್ಳಿ ನಿವಾಸಿ ಸುರೇಶ್ (50) ಮೃತ ವ್ಯಕ್ತಿ. ನಂಜನಗೂಡಿನಿಂದ ಚುಂಚನಹಳ್ಳಿಗೆ ತೆರಳುತ್ತಿದ್ದ ವೇಳೆ ಬಸ್ ನಲ್ಲಿಯೇ ಸುರೇಶ್ ಎಂಬುವವರಿಗೆ ಹೃದಯಾಘಾತವಾಗಿದೆ. ಬಸ್ ನಲ್ಲಿಯೇ ಪ್ರಯಾಣಿಕ ಉಸಿರು ಚಲ್ಲಿದ್ದಾರೆ.

Home add -Advt

ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ.


Related Articles

Back to top button