ಪ್ರಗತಿವಾಹಿನಿ ಸುದ್ದಿ; ಮುಂಬೈ: ಮುಂಬೈ ನಲ್ಲಿ ಪತ್ತೆಯಾಗಿದೆ ಎನ್ನಲಾಗಿದ್ದ ಕೋವಿಡ್ ರೂಪಾಂತರಿ ವೈರಸ್ ಎಕ್ಸ್ ಇ ಇದಿಗ ಗುಜರಾತ್ ನಲ್ಲಿ ಪತ್ತೆಯಾಗಿದ್ದು, ಭಾರತದಲ್ಲಿ ಹೊಸ ವರೈರಸ್ ಆತಂಕ ಎದುರಾಗಿದೆ.
ಎಕ್ಸ್ ಇ ಒಮಿಕ್ರಾನ್ ನ ಉಪ ರೂಪಾಂತರಿಯಾಗಿದ್ದು, ವಡೋದರಾದ ಗೋತ್ರಿ ಏರಿಯಾದ 60 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ.
ಈ ವ್ಯಕ್ತಿಯಲ್ಲಿ ಮಾರ್ಚ್ 11ರಂದು ಕೋವಿಡ್ ದೃಢಪಟ್ಟಿತ್ತು. ನಂತರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನು ಜಿನೋಮ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಎಕ್ಸ್ ಇ ಇರುವುದು ಗೊತ್ತಾಗಿದೆ.
ಎಕ್ಸ್ ಇ ವೈರಸ್ ಒಮಿಕ್ರಾನ್ ಗಿಂತ 10 ಪಟ್ಟು ಹೆಚ್ಚು ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಎಕ್ಸ್ ಇ ವೈರಸ್ ಪತ್ತೆ ಬಗ್ಗೆ ವರದಿಯಾಗಿತ್ತು. ಆದರೆ ದೃಢಪಟ್ತಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವರು ಇತ್ತೀಚೆಗೆ ತಿಳಿಸಿದ್ದರು. ಆದರೆ ಇದೀಗ ಈ ವೈರಸ್ ಗುಜರಾತ್ ನಲ್ಲಿ ಪತ್ತೆಯಾಗಿದೆ.
ಚಿನ್ನದ ದರ ಮತ್ತಷ್ಟು ಏರಿಕೆ; ಇಂದಿನ ಬೆಳ್ಳಿದರದಲ್ಲಿನ ಬದಲಾವಣೆ ಏನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ