Kannada NewsKarnataka NewsLatest
*BREAKING: ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ ಐವರು ವಿದ್ಯಾರ್ಥಿಗಳು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಶಾಲೆಯಲ್ಲಿ ನೀಡಲಾಗಿದ್ದ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಲ್ಲಿ ಬಿದ್ದಿದ್ದು, ಅದೇ ಊಟ ಸೇವಿಸಿದ ಐವರು ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ತಿಮ್ಮಾಪುರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ವಿಶ್ವಗಂಗಾ ಎನ್ ಜಿಒದಿಂದ ಬಿಸಿಯೂಟ ಪೂರೈಕೆಯಾಗುತ್ತದೆ. ಹೀಗೆ ಪೂರೈಕೆಯಾಗ ಊಟವನ್ನು ಮಧ್ಯಾಹ್ನ ಮಕ್ಕಳು ಸೇವಿಸಿದ್ದಾರೆ. ಮಕ್ಕಳಿಗೆ ಬಡಿಸಲಾಗಿದ್ದ ಊಟದಲ್ಲಿ ಸತ್ತಿರುವ ಹಲ್ಲಿಯೊಂದು ಪತ್ತೆಯಾಗಿದೆ. ಊಟದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ.
ತಕ್ಷಣ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ಬಿಇಒ ಯಲ್ಲಪ್ಪ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.



