Latest

ಹೊಲದಲ್ಲಿ ನೀರು ಎತ್ತುವ ಮೋಟರ್ ಕಳ್ಳತನ ಪ್ರಕರಣ: ಆರೋಪಿಯ ಬಂಧನ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯ ಸಾಯಿನಗರ ಕ್ಯಾಂಪ್ ಬಡಾವಣೆಯ ಸಮಾಂತರ ಪ್ರದೇಶದ ಹೊಲದಲ್ಲಿನ ನೀರು ಎತ್ತುವ ಮೋಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುದನೂರ(ಕೆ) ಗ್ರಾಮದ ಮಲಕಪ್ಪ ಹೇಳವರ ಬಂಧಿತ ಆರೋಪಿ. ಬಂಧಿತನಿಂದ 13 ಸಾವಿರ ಮೌಲ್ಯದ 2 ಎಚ್‌ಪಿ ಮೋಟರ್ ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳ್ಳತನ ಪ್ರಕರಣ ದಾಖಲಿಸಿಕೊಂಡ ಕೆಂಭಾವಿ ಠಾಣೆಯ ಪೋಲಿಸರು ಸಿಪಿಐ ದೌಲತ್ ಎನ್.ಕೆ ಅವರ ಮಾರ್ಗದರ್ಶನದಲ್ಲಿ ಕೆಂಭಾವಿ ಕ್ರೈಂ ಪಿಎಸ್ಐ ಹಣಮಂತಪ್ಪ ಮುಂಡರಗಿ ಹಾಗೂ ಠಾಣೆಯ ಸಿಂಬಂಧಿಗಳಾದ ಶಿವಲಿಂಗಪ್ಪ ಶೆಂಖರಗೌಡ ,ತಿರುಪತಿ, ಸೈಯದ್ ಹಾಗೂ ಪೆದ್ದಪ್ಪಗೌಡ ಕಳ್ಳನ ಶೋಧ ನಡೆಸಿದರು.

Home add -Advt

Related Articles

Back to top button