Kannada NewsKarnataka NewsLatest

ಇಂದು ಬೆಳಗಾವಿಯಲ್ಲಿ ಲೋಕಾರ್ಪಣೆಗೊಂಡಿದೆ ‘ಯಾನ’

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಆರಂಭಿಸಲಾದ ಸಾರ್ವಜನಿಕ ಸೈಕಲ್, ಇ-ಸೈಕಲ್ ಹಾಗೂ ಬೈಕ್ ಗಳ ಉದ್ಘಾಟನೆಯಾಗಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು  ಸಾರ್ವಜನಿಕ ಸೈಕಲ್, ಇ-ಸೈಕಲ್ ಹಾಗೂ ಬೈಕ್ ಗಳನ್ನು ಉದ್ಘಾಟಿಸಿದರು.

ಈ ಸೈಕಲ್ ಹಾಗೂ ಈ ಬೈಕ್ ಗಳನ್ನು ಸಾರ್ವಜನಿಕ ಸೇವೆಗಾಗಿ  ಸಮರ್ಪಿಸುವ   ಮೂಲಕ ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಜನರ ಓಡಾಟಕ್ಕಾಗಿ ಅನುಕೂಲ ಕಲ್ಪಿಸಿದೆ.

ಬಳಕೆ ಹೇಗೆ?:ಓಲಾ, ಉಬರ್ ಗಳ ಮಾದರಿಯನ್ನೇ ಸೈಕಲ್, ಇ- ಸೈಕಲ್ ಹಾಗೂ ಬೈಕ್ ಗಳ ಲಭ್ಯತೆ ಇರಲಿದೆ. ಆದರೆ ಇಲ್ಲಿ ಬಳಕೆ ವಿಧಾನಗಳು ವಿಭಿನ್ನ. ಇದಕ್ಕೆ ಬುಕ್ ಮಾಡಿದವರೇ ಚಾಲಕರೆಂಬುದನ್ನು ಮರೆಯಕೂಡದು.

*ಮೊದಲಿಗೆ ಯಾನಾ (Yana) ಆ್ಯಪ್ ಡೌನ್ ಲೋಡ್ ಮಾಡಬೇಕು. ಹಾಗೂ ಸೈನ್ ಇನ್ ಆಗಬೇಕು.

*ನಿಮ್ಮ ಹತ್ತಿರದ ಸೈಕಲ್, ಬೈಕ್ ಹುಡುಕಿ QR ಕೋಡ್ ಸ್ಕ್ಯಾನ್ ಮಾಡಿ, ಅನ್ ಲಾಕ್ ಮಾಡಬೇಕು.

*ಈಗ ನೀವು ಬಯಸಿದ ಸೈಕಲ್ ಅಥವಾ ಬೈಕ್ ಸೌಲಭ್ಯ ನಿಮಗೆ ಲಭಿಸುತ್ತದೆ.

*ನಿಮ್ಮ ರೈಡ್ ಮುಗಿಯುತ್ತಲೇ ಸೈಕಲ್, ಇ-ಸೈಕಲ್ ಅಥವಾ ಬೈಕ್ ಪೈಕಿ ಯಾವುದನ್ನು ನೀವು ಪಡೆದಿರುವಿರೋ ಅದನ್ನು ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿ ಅನ್ ಲಾಕ್ ಮಾಡಿ. ನಂತರ ಆ್ಯಪ್ ನಲ್ಲಿ End Ride ಬಟನ್ ಒತ್ತಿದರೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

NTA ಯಿಂದ 2023-24 ಶೈಕ್ಷಣಿಕ ವರ್ಷದ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

https://pragati.taskdun.com/nta-has-published-the-entrance-exam-schedule-for-the-academic-year-2023-24/

*ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಂಧನ*

https://pragati.taskdun.com/attica-gold-compenybabuarrest/

*ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಕೆಂಡಾಮಂಡಲ*

https://pragati.taskdun.com/d-k-shivakumarstatmentcm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button