
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯತ್ನಾಳ್ ಬಿಜೆಪಿಗೆ ವಾಪಸ್ ಬರ್ತಾರೆ. ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ ಇದೆ. ಆದರೆ ಮಾಧ್ಯಮದಲ್ಲಿ ಬಂದಿರೋದೆ ಬೇರೆ ಇದೆ. ಬಿಜೆಪಿಯಲ್ಲಿ ಯತ್ನಾಳ್ ಮುಂದುವರೆಯವ ವಿಶ್ವಾಸವಿದೆ, ಎಲ್ಲಿಯೂ ಹೋಗಲ್ಲ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್ ಎಸ್ ಎಸ್, ಬಿಜೆಪಿ ಪಕ್ಷ ಇದೆಯಲ್ಲ, ಅಷ್ಟೇಸಾಕು. ಮೊನ್ನೆ ಶಾಸಕರ ಕಮಿಟಿ ಮಿಟಿಂಗ್ ನಲ್ಲಿ ಚರ್ಚೆ ಆಗಿದೆ. ಪಕ್ಷಕ್ಕೆ ಮುಜಗುರ ಆಗೋತರಾ ಹೇಳಿಕೆ ಕೊಡಬೇಡ ಎಂದು ಹೇಳಿದ್ದೇವೆ. ಹಿಂದುತ್ವಕ್ಕಾಗಿ ಹೊಸ ಪಕ್ಷ ಸ್ಥಾಪನೆ ಬೇಕಿಲ್ಲ ಎಂದರು.
ಮಿಟಿಂಗ್ ನಲ್ಲಿ ಚರ್ಚೆ ಯಾದ ಪ್ರಕಾರ ಯತ್ನಾಳ್ ಅವರು ಲಿಂಗಾಯತ ಮಠಗಳಿಗೆ ಹಾಗೂ ನಾನು, ಲಿಂಬಾಳಿ ಮತ್ತು ಕುಮಾರ ಬಂಗಾರಪ್ಪ ಅವರು ಎಸ್ ಸಿ, ಎಸ್ ಟಿ ಹಾಗೂ ಒಬಿಸಿ ಮಠಗಳಿಗೆ ಭೇಟಿ ನೀಡುವ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.