*ವಿಜಯೇಂದ್ರ ಮರಳಿ ಬಿಜೆಪಿ ರಾಜ್ಯಾಧ್ಯಕ್ಷನಾದರೆ ಹೊಸ ಪಕ್ಷ ಕಟ್ಟುತ್ತೇನೆ ಎಂದ ಯತ್ನಾಳ್*

ನೂತನ ಪಕ್ಷದ ಹೆಸರನ್ನೂ ಘೋಷಿಸಿದ ಶಾಸಕ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮತ್ತೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಬಾರದು. ಒಂದು ವೇಳೆ ಮತ್ತೆ ಅವರೇ ಅಧ್ಯಕ್ಷರಾದರೆ ಜೆಸಿಬಿ ಆ್ಯಕ್ಟಿವ್ ಆಗಲಿದೆ. ಜೆಸಿಬಿ ಪಾರ್ಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಜೆ- ಜೆಸಿಬಿ ಅಂದ್ರೇ ಬಿ ಬಿಜೆಪಿ, ಸಿ ಕಾಂಗ್ರೆಸ್. ಅಲ್ಲಿನ ಅತೃಪ್ತಿರಿಗೆ ಕರೆತಂದು ಟಿಕೆಟ್ ಕೊಟ್ಟು ಗೆಲ್ಲಿಸುತ್ತೇನೆ. ವಿಜಯೇಂದ್ರ ಮರಳಿ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೆ ನಾನು ಹೊಸ ಪಕ್ಷ ಕಟ್ಟುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಜೆಸಿಬಿ ಹೆಸರಲ್ಲಿ ಹೊಸ ಪಕ್ಷ ಕಟ್ಟುತ್ತೇನೆ. ‘ಜೆ ಅಂದ್ರೆ ಜೆಡಿಎಸ್‌ನಲ್ಲಿ, ಸಿ ಅಂದ್ರೆ ಕಾಂಗ್ರೆಸ್ ಹಾಗೂ ಬಿ ಅಂದ್ರೆ ಬಿಜೆಪಿಯಲ್ಲಿ ನೊಂದವರು ನಮ್ಮ ಪಕ್ಷ ಸೇರುತ್ತಾರೆ’. ಈಗ ಬಿಜೆಪಿಯಲ್ಲಿರುವ 50 ಕ್ಕೂ ಅಧಿಕ ಶಾಸಕರ ಬೆಂಬಲ ನನಗಿದೆ. ಹೆಚ್ಚಿನ ಸಂಖ್ಯೆಯ ಸಂಸದರ ಬೆಂಬಲವೂ ನನಗಿದೆ ಎಂದು ಹೇಳಿದರು.
ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ವಿಜಯೇಂದ್ರರನ್ನು ಅಧ್ಯಕ್ಷ ಮಾಡಬಾರದು. ಒಂದು ವೇಳೆ ವಿಜಯೇಂದ್ರ ಅಧ್ಯಕ್ಷರಾದ್ರೆ ನಾನು ಜಿಸಿಬಿ ಪಕ್ಷ ಕಟ್ಟುವೆ. ಜೆಸಿಬಿ ಪಾರ್ಟಿ ರಚನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಆ್ಯಕ್ಟಿವ್ ಆಗಲಿದೆ. ನಾನು ಹೋದ ಕಡೆಗಳಲ್ಲಿ ಜನಬೆಂಬಲ ಸಿಗ್ತಿದೆ. ಹಿಂದೂತ್ವದ ಆಧಾರದ ಮೇಲೆ ಪಕ್ಷ ಕಟ್ಟುವೆ ಎಂದು ಘೋಷಿಸಿದ್ದಾರೆ.



