Latest

ಯೋಗೀಶ್ ಗೌಡ ಹತ್ಯೆ ಕೇಸ್; ಸಿಬಿಐಗೆ ಕೋರ್ಟ್ ನೋಟೀಸ್

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಿಬಿಐ ವಶದಲ್ಲಿರುವ ವಿನಯ್ ಕುಲ್ಕರ್ಣಿ ಜಾಮೀನಿಗಾಗಿ ಧಾರವಾಡ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನ.18ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.

Home add -Advt

ಇದೇ ವೇಳೆ ನ.18ರೊಳಗೆ ತಕರಾರು ಅರ್ಜಿ ಸಲ್ಲಿಸುವಂತೆ ಸಿಬಿಐ ಗೆ ಕೋರ್ಟ್ ನೋಟೀಸ್ ನೀಡಿದೆ.

Related Articles

Back to top button