Karnataka NewsLatestNational

ಮ್ಯೂಸಿಕ್ ಪೂಲ್ ಪಾರ್ಟಿ ವೇಳೆ ದುರಂತ: ಈಜುತ್ತ ನೀರಿನಲ್ಲಿ ಮುಳುಗಿ ಯುವಕ ಸಾವು

ರೆಸಾರ್ಟ್ ವೊಂದರಲ್ಲಿ ಮ್ಯೂಸಿಕ್ ಪೂಲ್ ಪಾರ್ಟಿ ವೇಳೆ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ಈಜಾಡುತ್ತಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

24 ವರ್ಷದ ಶಿಖರ್ ಸಿಂಗ್ ಮೃತ ಯುವಕ. ಯುವಕರು ಭಾರಿ ಮ್ಯೂಸಿಕ್ ನಡುವೆ ಈಜುಕೊಳದಲ್ಲಿ ಈಜುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ಓರ್ವ ಯುವಕ ನೀರಿನಲ್ಲಿ ಮುಳುಗಿದ್ದಾನೆ. ಡಿಜೆ ಸೌಂಡ್ ಸಂಭ್ರಮಾಚರಣೆ ನಡುವೆ ಯುವಕ ನೀರಿನಲ್ಲಿ ಮುಳುಗುತ್ತಿರುವುದು ಇತರ ಸ್ನೇಹಿತರಿಗೆ ಗೊತ್ತೇ ಆಗಿಲ್ಲ.

Home add -Advt

ನೀರಿನಿಂದ ಹೊರಬರಲು ಯುವಕ ಪರದಾಟ ನಡೆಸಿದ್ದಾನೆ ಆದರೂ ಸಾಧ್ಯವಾಗಿಲ್ಲ. ಡಿಜೆ ಸೌಂಡ್ ಬಂದ್ ಆಗುತ್ತಿದಂತೆ ಸ್ನೇಹಿತರು ಯುವಕನತ್ತ ನೋಡಿದ್ದಾರೆ. ತಕ್ಷಣ ಆತನನ್ನು ಮೇಲಕೆತ್ತಿ, ನೀರಿನಿಂದ ಹೊರ ತೆಗೆದಿದ್ದಾರೆ. ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೊಗಿತ್ತು. ಸಿಸಿಟಿವಿಯಲ್ಲಿ ಸೆರೆಯಾಗಿರುವ ಯುವಕನ ಸಾವಿನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

Back to top button