
ಪ್ರಗತಿವಾಹಿನಿ ಸುದ್ದಿ: ಯುವಕನನ್ನು ಅಪಹರಿಸಿ ಮಂಗಳಮುಖಿಯನ್ನಾಗಿಸಲು ಯತ್ನಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಯುವಕನನ್ನು ರಕ್ಷಿಸಿದ್ದಾರೆ.
ಮಂಗಳಮುಖಿಯರ ಗುಂಪು 25 ವರ್ಷದ ಯುವಕನನ್ನು ಅಪಹರಿಸಿ ತಮಿಳುನಾಡಿಗೆ ಕರೆದೊಯ್ದಿದೆ. ಯುವಕನ ಪೋಷಕರು ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ತಮಿಳುನಾಡಿನ ಮಧುರೈನಲ್ಲಿ ಯುವಕ ಪತ್ತೆಯಾಗಿದ್ದು, ಆತನನ್ನು ರಕ್ಷಿಸಿದ್ದಾರೆ.




