ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತನ್ನನ್ನು ದೂರ ಮಾಡುತ್ತಿದ್ದ ಪ್ರೇಯಸಿ ಮೇಲಿನ ಸಿಟ್ಟಿನಿಂದ ಯುವಕನೊಬ್ಬ ಆಕೆಯ ಸ್ಕೂಟರನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾನೆ.
ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಕ್ರಮ್ (25) ಆರೋಪಿ ಯುವಕ. ಘಟನೆ ನಂತರ ಹಲಸೂರು ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆದರೆ ಕಳೆದ ತಿಂಗಳು ಈತನನ್ನು ಡ್ರಗ್ ಪೆಡ್ಲಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದ ನಂತರ ಯುವತಿ ಆತನಿಂದ ದೂರವಾಗುತ್ತ ಸಾಗಿದ್ದಳು.
ಇದರಿಂದ ಸಿಟ್ಟಿಗೆದ್ದ ಆರೋಪಿ ಯುವತಿ ವಾಸಿಸುವ ಅಪಾರ್ಟ್ ಮೆಂಟ್ ಗೆ ಹೋಗಿ ಆಕೆ ಬೇಸ್ ಮೆಂಟ್ ನಲ್ಲಿ ಕವರ್ ಹಾಕಿ ಮುಚ್ಚಿಟ್ಟಿದ್ದ ಸ್ಕೂಟರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕುರಿತು ಯುವತಿ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಕೃತ್ಯ ಎಸಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ಸಾಕ್ಷ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ.
5G ಗಾಗಿ ವಾರಕ್ಕೆ 2,500 ಬೇಸ್ ಸ್ಟೇಷನ್‌ಗಳ ಸ್ಥಾಪನೆ
https://pragati.taskdun.com/nstallation-of-2500-base-stations-per-week-for-5g/
*ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/karnataka-is-a-leading-state-in-renewable-energy-production-chief-minister-basavaraja-bommai/
ಮತದಾರರ ಮಾಹಿತಿ ಕಳುವು ಮುಚ್ಚಿಕೊಳ್ಳಲು ಬಿಜೆಪಿಯಿಂದ ಸ್ಫೋಟ ಪ್ರಕರಣ ಬಳಕೆ ಎಂದಿದ್ದೇನೆ: ಡಿ.ಕೆ.ಶಿವಕುಮಾರ್
https://pragati.taskdun.com/d-k-shivakumarrectionstatments/
*ಅನ್ನಭಾಗ್ಯ ಅಕ್ಕಿ ಮೋದಿಯವರದ್ದು, ಚೀಲ ಮಾತ್ರ ಕಾಂಗ್ರೆಸ್ ನದ್ದು; ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ*
https://pragati.taskdun.com/mandyabjp-janasankalpa-yatrecm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ