ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದಲ್ಲಿ 5G ಸೇವೆಗಳನ್ನು ಒದಗಿಸಲು ಟೆಲಿಕಾಂ ಆಪರೇಟರ್‌ಗಳು ವಾರಕ್ಕೆ ಸರಾಸರಿ 2,500 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದ್ದಾರೆ.
ಈ ವಿಷಯವನ್ನು ಕೇಂದ್ರ ದೂರಸಂಪರ್ಕ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ತಿಳಿಸಿದ್ದಾರೆ
ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ಅವರು, “ನವೆಂಬರ್ 26 ರಿಂದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 20,980 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.
ಹೊಸದಾ ಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕ್ರಮವಾಗಿ 17,687 ಮತ್ತು 3,293 ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಿವೆ ಎಂದು ಅವರು ತಿಳಿಸಿದ್ದಾರೆ.
ಟೆಲಿಕಾಂ ಆಪರೇಟರ್‌ಗಳು ಪ್ರಸ್ತುತ ತಮ್ಮ ಚಂದಾದಾರರಿಗೆ 5G ಸೇವೆಗಳನ್ನು ಒದಗಿಸುತ್ತಿದ್ದಾರೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5G ಸಕ್ರಿಯಗೊಳಿಸಿದ ಸಾಧನಗಳನ್ನು ಅವರು ಹೊಂದಿದ್ದಾರೆ. ಪ್ರಸ್ತುತ, 5G ಬಳಕೆದಾರರ ಪ್ರತ್ಯೇಕ ಎಣಿಕೆಗಳನ್ನು ಟೆಲಿಕಾಂ ಆಪರೇಟರ್ ಗಳು ನಿರ್ವಹಿಸುತ್ತಿಲ್ಲ,” ಎಂದು ಸಚಿವರು ಹೇಳಿದ್ದಾರೆ.
*ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/karnataka-is-a-leading-state-in-renewable-energy-production-chief-minister-basavaraja-bommai/
*ಮತ್ತೆ ಬೆಳಗಾವಿಗೆ ಬರುವುದಾಗಿ ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ*
https://pragati.taskdun.com/messhambhuraj-deasibelagavivisit/
ಚೋರ್ಲಾ ಘಟ್ಟ ಪ್ರದೇಶದಲ್ಲಿ ರಸ್ತೆ ಅಪಘಾತ: ಓರ್ವ ಸಾವು, 12 ಜನರಿಗೆ ಗಾಯ
https://pragati.taskdun.com/road-accident-in-chorla-ghat-area-one-dead-12-injured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ