Belagavi NewsBelgaum NewsKannada NewsKarnataka News
ಬೈಕ್ ಸಮೇತ ನದಿಗೆ ಬಿದ್ದ ಯುವಕರು: ಓರ್ವ ನಾಪತ್ತೆ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಅಲತಗಾ ಗ್ರಾಮದ ಎಬ್ಬರು ಯುವಕರು ಬೈಕ್ ಮೇಲೆ ಪಕ್ಕದ ಕಂಗ್ರಾಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ನದಿಯ ಪಕ್ಕದಲ್ಲಿ ಹರಿಯುವ ಕಾಲುವೆಯಲ್ಲಿ ಬಿದ್ದ ಪರಿಣಾಮ ಓರ್ವ ಯುವಕ ಬೈಕ್ ಸಮೇತ ಹರಿದುಕೊಂಡು ಹೋಗಿ ನಾಪತ್ತೆಯಾಗಿದ್ದು, ಇನ್ನೊರ್ವ ಬದುಕುಳಿದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಅಲತಗಾ ಗ್ರಾಮದ ಓಂಕಾರ ಪಾಟೀಲ ನಾಪತ್ತೆಯಾದ ಯುವಕ. ಜ್ಯೋತಿನಾಥ ಪಾಟೀಲ ಬದುಕುಳಿದು ಬಂದವ ಎನ್ನಲಾಗಿದೆ. ನಿನ್ನೆ ಸಾಯಂಕಾಲ ಓಂಕಾರ ಹಾಗೂ ಜ್ಯೋತಿನಾಥ ಬೈಕ್ ಮೇಲೆ ಅಲತಗಾ ಗ್ರಾಮದಿಂದ ಕಂಗ್ರಾಳಿ ಕಡೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಬೈಕ್ ಹಾಕಿದ ಕಾರಣ ಸವಾರನ ಆಯತಪ್ಪಿ ಮಂದೆ ಹರಿಯುವ ಕಾಲುವೆಯಲ್ಲಿ ಬಿದ್ದಿದ್ದಾರೆ. ನೀರಿನ ರಭಸಕ್ಕೆ ಓಂಕಾರ ಪಾಟೀಲ ಎಂಬ ಯುವಕ ಬೈಕ್ ಸಮೇತ ನಾಪತ್ತೆಯಾಗಿದ್ದು ಜ್ಯೋತಿನಾಥ ಪಾಟೀಲ ಎಂಬಾತ ಬಚಾವ್ ಆಗಿದ್ದಾನೆ. ಸದ್ಯ ರಕ್ಷಣಾ ಸಿಬ್ಬಂದಿ ಸ್ಥಳದಲ್ಲೆ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.




