Kannada NewsKarnataka NewsLatest

ಅಪಘಾತಕ್ಕೆ ಯುವಕ ಬಲಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ : ಟ್ರಕ್, ಕಾರ್ ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಅಫಘಾತದಲ್ಲಿ ದ್ವಿಚಕ್ರ ವಾಹನಸವಾರನೋರ್ವ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಯಕ್ಸಂಬಾ ಪಟ್ಟಣದ ಹೊರವಲಯದ ಸಾಂಬ್ರೆ ತೋಟದ ಬಳಿ ಇಂದು ಮಧ್ಯಾನ್ಹ ಸಂಭವಿಸಿದೆ.

ಯಕ್ಸಂಬಾ ಪಟ್ಟಣದ ಅಕ್ಷಯ ಪ್ರಕಾಶ ಕೇಸ್ತೆ (೨೬) ಎಂಬ ಯುವಕ ಸಾವನ್ನಪ್ಪಿದ್ದು, ಇನ್ನೋರ್ವ ದ್ವಿಚಕ್ರ ವಾಹನ ಸವಾರ ಅಕ್ಷಯ ಚನಗೌಡಾ ಬಾವಚೆ (೨೬) ಗಾಯಗೊಂಡಿದ್ದರಿಂದ ಚಿಕ್ಕೋಡಿ ಕೆ.ಎಲ್.ಇ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿ.ಎಸ್.ಐ ಆರ್.ಆರ್.ಪಾಟೀಲ ಅವರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ಸದಲಗಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

Home add -Advt

Related Articles

Back to top button