
ಪ್ರಗತಿವಾಹಿನಿ ಸುದ್ದಿ: ಜನಪ್ರಿಯ ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲವ್ ಜಿಹಾದ್ ಆರೋಪದಲ್ಲಿ ಯೂಟ್ಯೂಬರ್ ಕ್ವಾಜಾ ಬಂದೇನವಾಜಾ ಮಹಮ್ಮದ್ ಹನೀಫ್ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
ಮುಕಳೆಪ್ಪ ಸುಳ್ಲು ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದ್ದು, ನಕಲಿ ದಾಖಲೆ ನೀಡಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ. ಸುಳ್ಲು ದಾಖಲೆ ಕೊಟ್ಟು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹ ವಾಗಿದ್ದಾನೆ ಎಂದು ದೂರಿನಲ್ಲಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಮುಕಳೆಪ್ಪ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ವಿಡಿಯೋ ಮಾಡುತ್ತಾನೆ. ಶಾರ್ಟ್ ವಿಡಿಯೋಗಳಲ್ಲಿ ಹಿಂದೂ ಯುವತಿಯರು ಹಗೂ ಧರ್ಮಕ್ಕೆ ಅವಮಾನವಾಗುವಂತೆ ವಿಡಿಯೋ ಮಾಡುತ್ತಾನೆ. ಕಳೆದ ಜೂನ್ 5ರಂದು ಖೊಟ್ಟಿ ದಾಖಲೆಗಳನ್ನು ಕೊಟ್ಟು ಆತ ವಿವಾಹವಾಗಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.