Latest

ಚುನಾವಣಾ ರಾಜಕೀಯದಿಂದ ವೈಎಸ್ ವಿ ದತ್ತಾ ನಿವೃತ್ತಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಕಡೂರು: ಹಿರಿಯ ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಆರಂಭದಿಂದಲೂ ಜೆಡಿಎಸ್ ನಾಯಕರಾಗಿ, ಎಚ್.ಡಿ. ದೇವೇಗೌಡ ಅವರ ಅತ್ಯಾಪ್ತರಾಗಿ ಗುರುತಿಸಿಕೊಂಡಿದ್ದ ದತ್ತಾ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಅಲ್ಲಿ ಟಿಕೆಟ್ ಸಿಗದೆ ನಿರಾಶೆಗೊಂಡ ಅವರು ಕೆಲವೇ ದಿನಗಳಲ್ಲಿ ಪುನಃ ಮಾತೃಪಕ್ಷಕ್ಕೆ ಮರಳಿದ್ದರು.

ಇದೀಗ ಅವರು ಕ್ಷೇತ್ರದ ಜನತೆಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಕಡೂರು ಕ್ಷೇತ್ರಕ್ಕೆ 2006ರಲ್ಲಿ ಅನಿವಾರ್ಯವಾಗಿ ಬಂದ ದಿನದಿಂದ 2023ರವರೆಗೆ ನನ್ನ ನಡವಳಿಕೆ, ನಿರ್ಧಾರ ಹಾಗೂ ಮತದಾರರೊಂದಿಗಿನ ಸಂಬಂಧದಲ್ಲಿ ಎಲ್ಲೋ ಎಡವಿದ್ದೇನೆ ಎನಿಸುತ್ತಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡಿದ್ದೇನೆ. ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವ ನನ್ನದು. ಹೀಗಾಗಿ ಚುನಾವಣಾ ಫಲಿತಾಂಶದ ಬಗ್ಗೆ ನನಗೇನೂ ಬೇಸರವಿಲ್ಲ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಬರುವ ಜೂನ್ 24ರಂದು ‘ಪ್ರಾಯಶ್ಚಿತ ಪಾದಯಾತ್ರೆ’ ಮೂಲಕ ಜನರ ಬಳಿ ಬರಲಿದ್ದೇನೆ. ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಎಂದಿನಂತೆ ನಿಮ್ಮ ಕಷ್ಟ, ಸುಖದಲ್ಲಿ ಭಾಗಿಯಾಗಲಿದ್ದೇನೆ. ಚುನಾವಣಾ ರಾಜಕೀಯದಿಂದ ಹೊರ ನಡೆಯಲು ನಿರ್ಧರಿಸಿದ್ದು ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ಮಾತೇ ಇಲ್ಲ ಎಂದು ದತ್ತಾ ಈ ಪತ್ರದಲ್ಲಿ ತಿಳಿಸಿದ್ದಾರೆ.

https://pragati.taskdun.com/ramanath-raipolitical-retirementmangalore/
https://pragati.taskdun.com/bjp-worker-stabbed-to-death-in-yadagiri/
https://pragati.taskdun.com/khanapuraveerabhadraswamipratishapane/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button