Latest

ಚೂರಿಯಿಂದ ಇರಿದು ಬಿಜೆಪಿ ಕಾರ್ಯಕರ್ತನ ಹತ್ಯೆ

ಪ್ರಗತಿವಾಹಿನಿ ಸುದ್ದಿ, ಯಾದಗಿರಿ: ಊಟ ಮಾಡಲು ಹೋಟೆಲ್ ಗೆ ಹೋದ ಬಿಜೆಪಿ ಕಾರ್ಯಕರ್ತನನ್ನು ಹೋಟೆಲ್ ಕೆಲಸಗಾರನೇ ಚೂರಿಯಿಂದ ಇರಿದು ಸಾಯಿಸಿದ್ದಾನೆ.

ಶ್ರೀನಿವಾಸ್ ಹತ್ಯೆಗೀಡಾದ ಕಾರ್ಯಕರ್ತ. ಅವರು ತಮ್ಮ ಸ್ನೇಹಿತರೊಂದಿಗೆ ರಾಯಲ್ ಗಾರ್ಡನ್ ಹೋಟೆಲ್ ನಿಂದ ಊಟ ಮುಗಿಸಿ ಹೊರ ಬರುವಾಗ ಪಾರ್ಕಿಂಗ್ ನಲ್ಲಿದ್ದ ಕಾರು ಹೊರ ತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಅವರ ಸ್ನೇಹಿತರು ಹಾಗೂ ಹೋಟೆಲ್ ಮಾಲೀಕನ ಮಧ್ಯೆ ಜಗಳ ಪ್ರಾರಂಭವಾಗಿದೆ.

Home add -Advt

ಇದನ್ನು ಕಂಡು ಜಗಳ ಬಿಡಿಸಲು ಮುಂದಾದ ಶ್ರೀನಿವಾಸ ಅವರನ್ನು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಅನಾಸ್ ಹಾಗೂ ಇತರ ನಾಲ್ಕೈದು ಜನ ಗುಂಪಾಗಿ ಬಂದು ಶ್ರೀನಿವಾಸ ಅವರ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದ ಶ್ರೀನಿವಾಸ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಘಟನೆಯಿಂದ ತ್ವೇಷಮಯ ವಾತಾವರಣ ಉಂಟಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

https://pragati.taskdun.com/khanapuraveerabhadraswamipratishapane/
https://pragati.taskdun.com/ramanath-raipolitical-retirementmangalore/
https://pragati.taskdun.com/monsoon-entry-on-june-4/

Related Articles

Back to top button