Uncategorized

ಮಹಿಳೆಗೆ ಲೈಂಗಿಕ ಕಿರುಕುಳ: ಪೊಲೀಸ್ ಅಧಿಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ

ಪ್ರಗತಿವಾಹಿನಿ ಸುದ್ದಿ, ಕಾಸರಗೋಡು: ಅಧಿಕಾರ ದುರುಪಯೋಗಪಡಿಸಿಕೊಂಡು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಆದೇಶಿಸಲಾಗಿದೆ.

ಕಾಸರಗೋಡು ಕ್ರೈಂ ಬ್ರ್ಯಾಂಚ್ ಇನ್ಸ್ಪೆಕ್ಟರ್ ಆರ್. ಶಿವಶಂಕರ ಇಲಾಖೆಯಿಂದ ನಿರ್ಗಮನಕ್ಕೆ ಅಣಿಯಾದ ಅಧಿಕಾರಿ. ಶಿವಶಂಕರ ಸೇವೆಯುದ್ದಕ್ಕೂ ನಾನಾ ರೀತಿಯ ದುರ್ವರ್ತನೆಗಳ ಮೂಲಕ ಶಿಸ್ತು ಕ್ರಮಗಳಿಗೆ ಒಳಗಾಗುತ್ತಲೇ ಬಂದಿದ್ದ. 2006ರಿಂದ ಈವರೆಗೆ ನಾಲ್ಕು ಬಾರಿ ಅಮಾನತುಗೊಂಡಿದ್ದಲ್ಲದೆ 11 ಬಾರಿ ಇಲಾಖಾ ಮಟ್ಟದ ಕ್ರಮಗಳನ್ನು ಎದುರಿಸಿದ್ದ.

Home add -Advt

ಅಕ್ರಮ ಹಣ ಸಂಪಾದನೆ, ಲೈಂಗಿಕ ಕಿರುಕುಳ, ನಿರಪರಾಧಿಗಳ ಮೇಲೆ ಕಾನೂನಿನ ಪ್ರಹಾರ ಸೇರಿದಂತೆ ನಾನಾ ಬಗೆಯ ದರ್ಪ್ ವರ್ತನೆಗಳನ್ನು ತೋರಿಸುತ್ತಿದ್ದ ಶಿವಶಂಕರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.

ಇದರ ಆಧಾರದಲ್ಲಿ ಕೇರಳ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನಿಲಕಾಂತ್ ಅವರು ಶಿವಶಂಕರಗೆ ಕೇರಳ ಪೊಲೀಸ್ ಕಾಯ್ದೆ ಕಲಂ 86 (3)ರ ಅನ್ವಯ ಪೊಲೀಸ್ ಸೇವೆಯಿಂದ ಮೇ ತಿಂಗಳಲ್ಲಿ ಕಡ್ಡಾಯ ನಿವೃತ್ತಿ ಹೊಂದುವಂತೆ ಮಾಡಿ ಆದೇಶ

ಹೊರಡಿಸಿದ್ದಾರೆ.

https://pragati.taskdun.com/responding-to-the-problem-devalathi-villagers-congratulated-dr-sonali-sarnobat/
https://pragati.taskdun.com/rabi-crop-damaged-in-38563-hectares-in-15-districts-due-to-rain-hail/
https://pragati.taskdun.com/a-27-year-old-artist-who-suddenly-collapsed-on-stage-and-died/

Related Articles

Back to top button