Politics

*ಸಚಿವ ಜಮೀರ್ ಅಹ್ಮದ್ ಗೆ ಲೋಕಾಯುಕ್ತ ಶಾಕ್*

ಪ್ರಗತಿವಾಹಿನಿ ಸುದ್ದಿ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಸಿಲುಕಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಇದೀಗ ಲೋಕಾಯುಕ್ತ ಶಾಕ್ ನೀಡಿದೆ.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ ಪ್ರಕರಣದಲ್ಲಿ ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ್ದಾರೆ. ಡಿ.3ರಂದು ಖುದ್ದು ವಿಚಾರಣೆ ಬರುವಂತೆ ಸಮನ್ಸ್‌ ನಲ್ಲಿ ಉಲ್ಲೇಖಿಸಲಾಗಿದೆ.

IMA ಚಿಟ್‌ಫಂಡ್ ವಂಚನೆ ಪ್ರಕರಣದ ತನಿಖೆ ವೇಳೆ, IMA ಮತ್ತು ಜಮೀರ್ ಅವರ ನಡುವೆ ಹಣಕಾಸು ವ್ಯವಹಾರ ನಡೆದಿರುವುದರ ಬಗ್ಗೆ ED ಪತ್ತೆ ಹಚ್ಚಿತ್ತು. ತದನಂತರದಲ್ಲಿ ಇನ್ನೂ ಹೆಚ್ಚಿನ ತನಿಖೆಗಾಗಿ (2021) ಜಮೀರ್ ಅವರಿಗೆ ಸಂಬಂಧಿಸಿ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಆ ವೇಳೆ ಯಾವ ದಾಖಲೆಗಳೂ ಸಿಕ್ಕಿರಲ್ಲಿ. ಆದರೆ ಜಮೀರ್ ತಮ್ಮ ಆದಾಯಕ್ಕಿಂತ ಮೀರಿ ಹೆಚ್ಚು ಸ್ವತ್ತು ಹೊಂದಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು.

ಈ ಕುರಿತಾಗಿ ACBಗೆ ಇ.ಡಿ ವಿವರಣಾತ್ಮಕ ವರದಿ ಒಪ್ಪಿಸಿ ತನಿಖೆಯ ಅಗತ್ಯ ಬಗ್ಗೆ ವಿವರಿಸಿತ್ತು. 2022ರ ಸೆಪ್ಟೆಂಬರ್‌ನಲ್ಲಿ ACB ರದ್ದಾದ ಕಾರಣದಿಂದಾಗಿ ಎಲ್ಲಾ ಕೇಸ್ ಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದವು. ಆಗಿನಿಂದ ಈ ಪ್ರಕರಣದಲ್ಲಿ ಮಹತ್ವದ ತನಿಖೆಯ ಬೆಳವಣಿಗೆ ಆಗದ ಕಾರಣ, ಈಗ ಮರುಜೀವ ಸಿಕ್ಕಿದೆ. ಆದ್ದರಿಂದ ಜಮೀರ್ ಅವರಿಗೆ ಇಂದು ಲೋಕಾ ಸಮನ್ಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದೆ.

Home add -Advt

Related Articles

Back to top button