Latest

ಇಂಧನ ಬೆಲೆ ಏರಿಕೆ: ಕಿತ್ತೂರಲ್ಲಿ ಬಿಜೆಪಿ ಪ್ರತಿಭಟನೆ

   ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರ
ರಾಜ್ಯ ಸರಕಾರದಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಸರಕಾರದ ಸಚಿವರು ಆಪ್ತರ ಮೂಲಕ ವಿಧಾನಸೌಧದಲ್ಲಿಯೇ ಲಂಚ ಪಡೆಯುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಇಲ್ಲಿಯ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ರವಿವಾರ ಇಂಧನ ಬೆಳೆ ಹೆಚ್ಚಳ ಮತ್ತು ಸಚಿವರ ಲಂಚಾವತಾರ ಖಂಡಿಸಿ ಸಮ್ಮಿಶ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈ ಕೂಡಲೇ ಸಚಿವರು ರಾಜಿನಾಮೆ ನೀಡಬೇಕು. ವಿಧಾನ ಸೌಧದಲ್ಲಿ ಸಿಕ್ಕ ರೂ ೨೫ ಲಕ್ಷಗಳನ್ನು ಒಬ್ಬ ಜವಾಬ್ದಾರಿಯುತ ಹುದ್ದೆ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಇದೇನು ಪುಟಗೋಶಿ ಹಣ ಎಂದು ಪ್ರತಿಕ್ರಿಯೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಪೋಶಿಸುತ್ತಿದ್ದಾರೆ. ಅವರ ಆಡಳಿತದಿಂದ ರಾಜ್ಯದ ಜನತೆ ಶೋಷಣೆ ಅನುಭವಿಸುವಂತಾಗಿದೆ. ಎಂದು ಹೇಳಿದರು.
ಕೆಎಮ್ಎಫ್ ನಿರ್ದೇಶಕ ಬಸವರಾಜ ಪರವಣ್ಣವರ ಮಾತನಾಡಿ, ರಾಜ್ಯ ಸರಕಾರದ ಕಾಮಗಾರಿಗಳು ಕೇವಲ ಮೂರು ತಿಂಗಳಲ್ಲಿ ಹಳ್ಳ ಹಿಡಿಯುತ್ತಿವೆ. ಆದರೆ ಕೇಂದ್ರ ಸರಕಾರ ಕೈಗೊಳ್ಳುವ ಕೆಲಸಗಳು ಜನರಿಗೆ ಜೀವನ ಪೂರ್ತಿ ಉಪಯೋಗವಾಗುವಂತಹ ಕೆಲಸಗಳಾಗಿವೆ. ಹತ್ತು ಹಲವಾರು ಒಳ್ಳೆಯ ಕೆಲಸಗಳನ್ನು ಮೋದಿ ಸರಕಾರ ಮಾಡುತ್ತಿದೆ. ಯುವಕರು ಜಾಗೃತಗೊಂಡು ಮೋದಿಯವರ ಕೈ ಬಲಪಡಿಸಬೇಕು, ಮುಂದೆ ಮೋದಿ ಸರಕಾರ ಬರದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯೆ ಸರಸ್ವತಿ ಹೈಬತ್ತಿ ಮಾತನಾಡಿ, ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ದಿಯ ಬಗ್ಗೆ ಗಮನ ಹರಿಸುವಲ್ಲಿ ವಿಫಲರಾಗಿ ತಂದೆ ಮತ್ತು ಮಗ ಮಹಿಳೆಯರಂತೆ ಅಳುತ್ತಾ ಇದ್ದಾರೆ. ಅಳುವದನ್ನು ಬಿಟ್ಟು ಅಭಿವೃದ್ದಿಯ ಕಡೆಗೆ ಗಮನ ಹರಿಸಿ ಇಲ್ಲದಿದ್ದರೆ ರಾಜಿನಾಮೆ ನೀಡಿ ಮನೆಗೆ ತೆರಳಿರಿ ಎಂದು ಹೇಳಿದರು.
ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಸೋಮೆಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶ್ರೀಕರ ಕುಲಕರ್ಣಿ ಮಾತನಾಡಿದರು.
ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ವಿಶ್ವನಾಥ ಬಿಕ್ಕಣ್ಣವರ, ಚನಬಸಪ್ಪ ಮೊಕಾಶಿ, ಸಂದೀಪ ದೇಶಪಾಂಡೆ, ಕಿರಣ ಪಾಟೀಲ, ಹಣಮಂತ ಲಂಗೋಟಿ, ಉಳವಪ್ಪ ಉಳ್ಳಾಗಡ್ಡಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button