Latest

ಏ.29, 30, ಮೇ.1ರಂದು ಹಲವೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ 110 ಕೆವ್ಹಿ ವಡಗಾಂವ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಭಾಗ್ಯನಗರ ಪೂರಕದ ಮೇಲೆ ಬರುವ ಮೊದಲನೇ ಕ್ರಾಸ್ ದಿಂದ ಎಂಟನೇ ಕ್ರಾಸ್‌ವರೆಗೆ ಬರುವ ಎಲ್ಲ ಪ್ರದೇಶಗಳಲ್ಲಿ ಏಪ್ರಿಲ್ 29 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Home add -Advt

 33 ಕೆವಿ ಆರ್ ಎಮ್-2 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-8 ಶಹಾಪುರ ಪೂರಕದ ಮೇಲೆ ಬರುವ ನ್ಯೂಗುಡ್ ಶೆಡ್ ರೋಡ್, ಶಾಸ್ತ್ರಿ ನಗರ, ಎಸ್.ಪಿ.ಎಮ್.ರೋಡ್, ಕಪಿಲೇಶ್ವರರೋಡ್, ಹುಲಭತ್ತೆ ಕಾಲೋನಿ, ಎಮ್.ಎಫ್.ರೋಡ್, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್, ದಾಣಿಗಲ್ಲಿ, ಕೊರೆಗಲ್ಲಿ ಹಾಗೂ ಶಹಾಪುರ ಪೂರಕದ ಮೇಲೆ ಬರುವ ಎಲ್ಲ ಪ್ರದೇಶಗಳಲ್ಲಿ ಏಪ್ರಿಲ್ 30 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

33 ಕೆವಿ ಆರ್ ಎಮ್-1 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-3 ಆರ್.ಪಿ.ಡಿ ಪೂರಕದ ಮೇಲೆ ಸೋಮವಾರ ಪೇಟ ಮಂಗಳವಾರ ಪೇಟ, ಬುಧವಾರ ಪೇಟ, ಗುರುವಾರ ಪೇಟ, ಖಾನಾಪುರ ರೋಡ, ಟಿಳಕವಾಡಿ ಪ್ರದೇಶಗಳಲ್ಲಿ ಮೇ 1 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button