ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆಯಡಿಯಲ್ಲಿ ಬೆಳಗಾವಿಯ ಗಾಂಧಿ ನಗರದಲ್ಲಿ ಸುಮಾರು 60 ಫಲಾನುಭವಿಗಳಿಗೆ ಇಂದು ಶಾಸಕ ಅನಿಲ ಬೆನಕೆ ಉಚಿತವಾಗಿ ಗ್ಯಾಸ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಭಾರತವನ್ನು ಹೊಗೆ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲ ಬಡ ವರ್ಗದ ಜನರಿಗೂ ಗ್ಯಾಸ್ ವಿತರಿಸುವ ಸಲುವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದು ಬಡವರ್ಗದ ಜನರ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಹೇಶ್ವರಿ ಸೋಮಜಿಚೆ, ಸಂತೋಷ ಸೋಮಜಿಚೆ, ನಿಖಿಲ ಮುರಕುಟೆ, ನಾಗೇಶ ಲಂಗರಖಂಡೆ, ಆಕಾಶ ಎಂಟರ್ಪ್ರೈಸಿಸಿ ಮ್ಯಾನೇಜರ ನಾಯಕ್ ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಶೇರ್ ಮಾಡಿ ಮತ್ತು ಬೆಲ್ ಒತ್ತಿ ಸಬ್ ಸ್ಕ್ರೈಬ್ ಮಾಡಿ)