Latest

ಬೆಳಗಾವಿ -ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಅಪಘಾತ, ಇಬ್ಬರ ಸಾವು

    ಪ್ರಗತಿವಾಹಿನಿ ಸುದ್ದಿ, ಖಾನಾಪುರ

ಬೆಳಗಾವಿ -ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಹೆದ್ದಾರಿಯ ಜಾಂಬೋಟಿ-ಕಣಕುಂಬಿ ಮಾರ್ಗ ಮಧ್ಯದ ಪಾರವಾಡ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಜಾಂಬೋಟಿಯಿಂದ ಕಣಕುಂಬಿಯತ್ತ
ಹೊರಟಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಬಂದ ಅಪರಿಚಿತ ವಾಹನ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಾಲ್ಲೂಕಿನ ಕಣಕುಂಬಿ ನಿವಾಸಿ ದೀಪಕ ಪೋಟೆ (35) ಎಂದು ಗುರುತಿಸಲಾಗಿದೆ.

ಚೋರ್ಲಾ ಕ್ರಾಸ್ ಬಳಿ ಮತ್ತೊಂದು ಪ್ರಕರಣದಲ್ಲಿ ರಸ್ತೆ ಬದಿ ಹೊರಟಿದ್ದ ಮಹಿಳೆಗೆ ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದ ಪರಿಣಾಮ ಚೋರ್ಲಾ ಗ್ರಾಮದ  ಲಕ್ಷ್ಮೀ ಗವಸ್ (65) ಸಾವನ್ನಪ್ಪಿದ್ದಾರೆ. ಈ ಅಪಘಾತಗಳ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button