ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಇಂದು ಎಷ್ಟೋ ಹಿರಿಯ ನಾಗರಿಕರಿಗೆ, ಒಬ್ಬಂಟಿ ಜೀವನ ನಡೆಸುವವರಿಗೆ ವೈದ್ಯಕೀಯ ಸೇವೆಗಳು ಸಿಗುವುದು ಕೇವಲ ಆಸ್ಪತ್ರೆಗಳಲ್ಲಿ ಎಂಬ ಕಲ್ಪನೆ ಇದೆ. ಆದರೆ ಇದನ್ನು ತೊಡೆದು ಹಾಕಿ ವೈದ್ಯಕೀಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಸದುದ್ದೇಶದಿಂದ ಹೋಂ ನರ್ಸಿಂಗ್ ತರಬೇತಿ ಆರಂಭಿಸಲಾಗಿದೆ ಎಂದು ಎಂದು ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಹೇಳಿದರು.
ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೋಂ ನರ್ಸಿಂಗ್ ತರಬೇತಿಂiನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಯುಎಸ್ಎಂ ಕೆಎಲ್ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಮಾತನಾಡಿ, ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಸಾಧ್ಯವಾಗದ ಜನರಿಗೆ ಸೇವೆ ನೀಡಲು ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಮಾತನಾಡಿ, ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ರೋಗಿಗಳಿಗೆ ಅಗತ್ಯ ಶೂಶ್ರುಷೆ ನೀಡಲು ಇದೊಂದು ವರದಾನವಾಗಿದೆ ಎಂದು ಹೇಳಿದರು.
ಕೆಎಲ್ಇ ಹೋಮಿಯೊಪಥಿಕ್ ಪ್ರಾಚಾರ್ಯ ಡಾ. ಎಂ.ಎ. ಉಡಚನಕರ, ಹಿರಿಯ ತಜ್ಞ ಡಾ. ಸಿ.ಎನ್. ತುಗಶೆಟ್ಟಿ, ಮಾಜಿ ನಗರಸೇವಕ ಸಂಜಯ ಸವ್ವಾಶೇರಿ ಮಾತನಾಡಿದರು.
ಹಿರಿಯ ವೈದ್ಯ ಡಾ.ಬಿ.ಎಸ್. ಮಹಾಂತಶೆಟ್ಟಿ, ಮಾಜಿ ನಗರ ಸೇವಕ ಮನೋಹರ ಹಲಗೇಕರ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ಡಾ. ಸತೀಶ ಧಾಮನಕರ, ನರ್ಸಿಂಗ್ ಅಧೀಕ್ಷಕಿ ವಾಘಮಾರೆ, ಹೋಂ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಸಂತೋಷ ಇತಾಪೆ ನಿರೂಪಿಸಿದರು. ಮಂಜುಳಾ ಪಿಸೆ ಸ್ವಾಗತಿಸಿದರು. ಸುರೇಖಾ ಚಿಕ್ಕೋಡಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ