Latest

ರಾಮದುರ್ಗ ಬಳಿ ವಿದ್ಯುತ್ ತಂತಿ ತುಳಿದು ನಾಲ್ವರ ಸಾವು

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ

ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದ ರೈತ ಕುಟುಂಬವೊಂದು ಗುರುವಾರ ಬೆಳಗಿನ ಜಾವ 5-30 ರ ಸುಮಾರಿಗೆ ಎತ್ತಿನ ಬಂಡಿಯಲ್ಲಿ ತೋಟಕ್ಕೆ ಹೊರಟಿದ್ದಾಗ ಹರಿದು ಬಿದ್ದಿರುವ ವಿದ್ಯುತ್ ತಂತಿ ಎತ್ತುಗಳ ಕಾಲಿಗೆ ತಗುಲಿ ಬಂಡಿಯಲ್ಲಿದ್ದ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ತಿಮ್ಮಾಪುರ ಗ್ರಾಮದ ರೇವಪ್ಪ ಹನಮಂತ ಕಲ್ಲೊಳ್ಳಿ(32), ಈತನ ಪತ್ನಿ ರತ್ನವ್ವ ರೇವಪ್ಪ ಕಲ್ಲೊಳ್ಳಿ(29), ಪುತ್ರ ಚೇತನ ರೇವಪ್ಪ ಕಲ್ಲೊಳ್ಳಿ(3), ರೇವಪ್ಪನ ಅಣ್ಣನ ಮಗ ಕೃಷ್ಣಾ (3) ಹಾಗೂ ಎರಡು ಎತ್ತುಗಳು ಈ ದರ್ಘಟನೆಗೆ ಬಲಿಯಾಗಿವೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Home add -Advt

Related Articles

Back to top button