ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರದ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಸಂಸ್ಥೆಯ ಲೈಲಾ ಶುಗರ್ಸ್ ಜ.1ರವರೆಗೆ ಒಟ್ಟು ಒಂದು ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡಿದೆ.
97 ಸಾವಿರ ಟನ್ ಕಬ್ಬು ನುರಿಸಿರುವ ಕಾರ್ಖಾನೆ ಶೇ.11 ರಿಕವರಿಯಲ್ಲಿ ಸಕ್ಕರೆ ಉತ್ಪಾದನೆ ಮಾಡಿದ್ದು, ಖಾನಾಪುರ ತಾಲೂಕಿನ 88 ಸಾವಿರ ಟನ್ ಕಬ್ಬು ನುರಿಸಿದೆ ಎಂದು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ ಹೇಳಿದರು.
ಕಾಡಿನ ಅಂಚಿನ ರೈತರ ಕಬ್ಬು ನುರಿಸಲು ಮೊದಲ ಆದ್ಯತೆ ನೀಡಲಾಗಿದೆ. ಈ ಮೂಲಕ ಕಾಡಂಚಿನ ರೈತರ ಹೊಲಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಅಳಿಲು ಸೇವೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ