ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶಾಸಕ ಆನಂದ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತೂ ಕೊನೆಗೂ ದೂರು ದಾಖಲಾಗಿದೆ.
ಪೊಲೀಸರು ಆನಂದ ಸಿಂಗ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ದೂರು ದಾಖಲಿಸಿಕೊಂಡಿದ್ದಾರೆ.
ಸಚಿವರಾದ ತುಕಾರಾಮ್, ಶಾಸಕರಾದ ರಘುಮೂರ್ತಿ, ರಾಮಪ್ಪ, ತನ್ವೀರ್ ಸೇಠ್ ತಪ್ಪಿಸದಿದ್ದರೆ ಗಣೇಶ ನನ್ನನ್ನು ಮುಗಿಸಿಬಿಡುತ್ತಿದ್ದರು ಎಂದು ಆನಂದ ಸಿಂಗ್ ಹೇಳಿದ್ದಾರೆ.
ನನಗೆ ಚುನಾವಮೆ ಸಂದರ್ಭದಲ್ಲಿ ಸಹಾಯ ಮಾಡಲಿಲ್ಲ, ನಿನ್ನನ್ನು ಮುಗಿಸಿಬಿಡುತ್ತೇನೆ ಎಂದೆಲ್ಲ ಹೇಳಿ ನನಗೆ ಪಾಟ್ ಹಾಗೂ ಬಡಿಗೆಗಳಿಂದ ಹೊಡೆದಿದ್ದಾನೆ. ನನ್ನನ್ನು ಕೆಳಗೆ ಬೀಳಿಸಿ ತುಳಿದಿದ್ದಾನೆ. ಪಿಸ್ತೂಲ್ ಕೊಡಿ ಇಲ್ಲೇ ಕೊಲ್ಲುತ್ತೇನೆ ಎಂದು ಅಬ್ಬರಿಸಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದೂ ದೂರಲಾಗಿದೆ. ಪೊಲೀಸರು ಸೆಕ್ಷನ್ 323, 324, 307, 504, 506ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಸಂಪೂರ್ಣ ವಿವರ ಇಲ್ಲಿದೆ:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ