Latest

ಉಡಾನ್ ಯೋಜನೆಯ ಮೊದಲ ವಿಮಾನ ನಾಳೆಯಿಂದ ಬೆಳಗಾವಿ-ಹೈದರಾಬಾದ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಉಡಾನ್-3 ಯೋಜನೆಯಡಿ ಮೊದಲ ವಿಮಾನ  ಬೆಳಗಾವಿ ವಿಮಾನ ನಿಲ್ದಾಣದಿಂದ ಬುಧವಾರ ಹಾರಾಟ ಆರಂಭಿಸಲಿದೆ. 

ಬೆಳಗಾವಿ ಹೈದರಾಬಾದ್ ಮಧ್ಯೆ ವಾರದ 7 ದಿನವೂ ಸ್ಪೈಸ್ ಜೆಟ್ ವಿಮಾನ ಸಂಚಾರ ಇರಲಿದ್ದು, ಸಂಜೆ 5.35 ಬೆಳಗಾವಿಗೆ ಆಗಮಿಸುವ ವಿಮಾನ 5.55ಕ್ಕೆ ಇಲ್ಲಿಂದ ಹೊರಡಲಿದೆ. 

ಬೆಳಗಾವಿ ನಾಗರಿಕರ ತೀವ್ರ ಹೊರಾಟದ ನಂತರ ಉಡಾನ್ 3ರಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಆಯ್ಕೆಯಾಗಿತ್ತು.  ಸಂಸದರಾದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಅಭಯ ಪಾಟೀಲ ಮೊದಲಾದವರು ಉಡಾನ್ 3ರಲ್ಲಿ ಬೆಳಗಾವಿ ಸೇರಿಸಲು ಶ್ರಮಿಸಿದ್ದರು. 

Home add -Advt

Related Articles

Back to top button