Latest

ಏ.11 ರಂದು ಮತದಾನ ಜಾಗೃತಿ ಬೈಕ್ ರ್‍ಯಾಲಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮತದಾನದ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ದಂಡು ಮಂಡಳಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರಿಂದ ಗುರುವಾರ(ಏ.11) ರಂದು ಬೆಳಗ್ಗೆ 10 ಗಂಟೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
ರ್‍ಯಾಲಿಯು ಬೆಳಗಾವಿ ದಂಡು ಮಂಡಳಿ ಕಚೇರಿಯಿಂದ ಪ್ರಾರಂಭಗೊಂಡು ಇಂಡಿಪೆಂಡೆನ್ಸ್ ರಸ್ತೆ, ಶರ್ಕತ್ ಪಾರ್ಕ, ಶೌರ್ಯ ಚೌಕ, ಗಣೇಶಪೂರ ರಸ್ತೆ, ಬುಡಾ ಪ್ಲಾಟ್ಸ್, ಗಣೇಶ ಗುಡಿ, ಗಾಂಧಿ ಚೌಕ ಮಾರ್ಗವಾಗಿ ದಂಡು ಮಂಡಳಿ ಕಚೇರಿ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಬೆಳಗಾವಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button