ಜಾನಪದ ಎಂಬುದು ತಂದೆ-ತಾಯಿ ಸಮಾನ ; ಯಮನಪ್ಪ ಜಾಲಗಾರ


ಪ್ರಗತಿವಾಹಿನಿ ಸುದ್ದಿ, ಕಲಘಟಗಿ (ಧಾರವಾಡ ಜಿಲ್ಲೆ)
ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಜನನಕ್ಕೆ ಕಾರಣವಾದ ತಂದೆ-ತಾಯಿಯರನ್ನು ಮರೆಯುವುದಿಲ್ಲ. ಹಾಗೆಯೇ ನಮ್ಮ ಜಾನಪದವು ನಮ್ಮ ತಂದೆ-ತಾಯಿಯ ಸ್ಥಾನದಲ್ಲಿದೆ. ನಮ್ಮ ನಾಡು-ನುಡಿ ಸಂಸ್ಕೃತಿಯನ್ನು ಕಟ್ಟಿಕೊಂಡಿದೆ. ಅದನ್ನು ಎಂದಿಗೂ ಮರೆಯಲಾಗದು ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಹೇಳಿದರು.
ಕಲಘಟಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ವತಿಯಿಂದ ೨೦೧೯ರ ರಾಜ್ಯ ಮಟ್ಟದ ’ಕಲಾಶ್ರೀ’, ’ರಂಗಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೊಹ್ಮದಶಫಿ ನೂಲಕರ, ಕು. ಅನಿತಾ ಆರ್., ಸುರೇಶ ಹಿರೆಣ್ಣವರ, ಶ್ರೀಧರ ಭಜಂತ್ರಿ, ಶಿವಕುಮಾರ ಮಂಗಳೂರು, ಕು. ಪ್ರಿಯಾಂಕಾ ಭಜಂತ್ರಿ, ಕು. ಅಕ್ಷತಾ ಗಚ್ಚಿನಮನಿ, ಕು. ಅಪೂರ್ವ ಭಜಂತ್ರಿ, ಕು. ಐಶ್ವರ್ಯ ಕಲಾಲ, ಕು. ಮಹನ್ಯ ಪಾಟೀಲ ಮುಂತಾದ ಸಾಧಕರಿಗೆ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳಪ್ಪ ಬಡ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಜಗದ್ಗುರು ಅನ್ನದಾನೇಶ್ವರ ಶಾಖಾ ಮಠದ ಮಹದೇವ ದೇವರು ಸಾನಿಧ್ಯ ವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ