ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ಮತ್ತು ಎನ್ ವಿ ಬರಮನಿ ಎಸಿಪಿ ಮಾರ್ಕೆಟ ಜಂಟಿ ಕಾರ್ಯಾಚರಣೆ ನಡೆಸಿ, ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ. 5 ಮೊಬೈಲ್ ಸಮೇತ 1.79 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದ್ವಾರ ರೋಡ್ ನ ಸಂಬಾಜಿ ಉದ್ಯಾನವನ ಹತ್ತಿರ 5-6 ಜನ ಸೇರಿ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ 8 ಗಂಟೆಯಿಂದ ಆರಂಭವಾದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ತಂಡಗಳ ನಡುವೆ ನಡೆಯುತ್ತಿರುವ ಐಪಿಎಲ್ ಕ್ರಿಕೇಟ್ ಆಟದ ಸೋಲು ಗೆಲವಿನ ಫಲಿತಾಂಶದ ಮೇಲೆ ಹಣವನ್ನು ಪಣಕ್ಕೆ ಕಟ್ಟಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಾರೆ ಎನ್ನುವ ಮಾಹಿತಿ ಮೇಲೆ ಈ ದಾಳಿ ನಡೆಯಿತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ಮತ್ತು ನಾರಾಯಣ ಬರಮನಿ ಎಸಿಪಿ ಮಾರ್ಕೆಟ್ ಹಾಗೂ ಅವರ ಸಿಬ್ಬಂದಿಗಳಾದ ಐ. ಎಸ್ ಪಾಟೀಲ್, ಶಿವಲಿಂಗ್ ಪಾಟೀಲ್ ಶಂಕರ ಪಾಟೀಲ, ನವೀನಕುಮಾರ ಎ.ಬಿ. ಅನೀಲ ರಂಜರೆ, ಖಾನಾಪೂರೆ, ವಿಶ್ವನಾಥ ಹೊಸಮನಿ ತಂಡ ಜಂಟಿಯಾಗಿ ದಾಳಿ ಮಾಡಿತು.
ರಾಹುಲ್ ರಾಜಾರಾಮ್ ಮನ್ನೂರಕರ ಸಾಃ ಕಪಿಲೇಶ್ವರ ರೋಡ ಬೆಳಗಾವಿ, ಅಭಿಷೇಕ ಅರುಣ ಪಾಟೀಲ ಸಾಃ ಮನಂ 9119 ಕುಲಕರ್ಣಿ ಗಲ್ಲಿ ಬೆಳಗಾವಿ, ವಿಜಯ ಮದನ ದಡ್ಡಿಕರ ಸಾಃ ಜೇಡ್ ಗಲ್ಲಿ ಶಹಾಪೂರ ಬೆಳಗಾವಿ, ಜಾವೇದ್ ಇಕ್ಬಾಲ್ ಅರ್ಕಟೆ ಸಾಃ ಪಂಜಿಬಾಬಾ ಶಿವಾಜಿ ನಗರ ಬೆಳಗಾವಿ, ಅಶ್ರಪ್ ಅಲ್ತಾಪ್ ಬಂಕಾಪೂರ ಸಾಃ ಪಂಜಿಬಾಬಾ ಶಿವಾಜಿ ನಗರ ಬೆಳಗಾವಿ, ತೌಸಿಫ್ ಸಲಿಂ ಮಕಾನದಾರ ಸಾಃ ಪಂಜಿಬಾಬಾ ಶಿವಾಜಿ ನಗರ ಬೆಳಗಾವಿ ಇವರನ್ನು ವಶಕ್ಕೆ ಪಡೆದುಕೊಂಡು 1.79 ಲಕ್ಷ ರೂ. ನಗದು ಹಾಗೂ 5 ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ