ಪ್ರಗತಿವಾಹಿನಿ ಸುದ್ದಿ, ಮಾಂಜರಿ
ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ದೂಧಗಂಗಾ ಸಕ್ಕರೆ ಕಾರಖಾನೆ ಬಳಿ ರವಿವಾರ ಮುಂಜಾನೆ ಸಂಭವಿಸಿದೆ.
ಮಹಾರಾಷ್ಟ್ರದ ಬೀಡ ಜಿಲ್ಲೆಯ ಕಬ್ಬು ಕಟಾವು ಕಾರ್ಮಿಕನ ಮಗ ಕೀರ್ತಿರಾಜ ಯುವರಾಜ ಶಿಂಧೆ (೫) ಎಂಬ ಬಾಲಕ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. ಕಾರಖಾನೆಯ ಹತ್ತಿರ ರಸ್ತೆ ದಾಟುವಾಗ ಕಲ್ಲೋಳ ಗ್ರಾಮಕ್ಕೆ ಹೊರಟ ದ್ವಿಚಕ್ರವಾಹನ ಜೋರಾಗಿ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ