Latest

ನಾಳೆ ಪ್ರತಿಭಟನೆ, ಎಲ್ಲಾ ಸರಕಾರಿ ಕಾರ್ಯಕ್ರಮಕ್ಕೆ ತಡೆ -ಕರವೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಭಾನುವಾರ ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ ಗುಡಗನಟ್ಟಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ವರದಿಗೆ ಸ್ಪಂದಿಸಿ ಈ ನಿರ್ಧಾರ ತೆಗೆದುಕೊಂಡಿರುವ ಅವರು, ವಿಟಿಯು ವಿಭಜನೆ ನಿರ್ಧಾರ ಕೈ ಬಿಡುವವರೆಗೂ ಸರಕಾರದ ಎಲ್ಲ ಕಾರ್ಯಕ್ರಮಗಳಿಗೆ ಹಾಗೂ ಬೆಳಗಾವಿಗೆ ಆಗಮಿಸುವ ಮಂತ್ರಿಗಳಿಗೆ ತಡೆಯೊಡ್ಡುವುದಾಗಿ ಎಚ್ಚರಿಸಿದ್ದಾರೆ.

ವಿಟಿಯು ಬೆಳಗಾವಿಯ ಹೆಮ್ಮೆ. ಅದನ್ನು ಯಾವುದೇ ಕಾರಣಕ್ಕೂ ವಿಭಜಿಸಲು ಅವಕಾಶ ಕೊಡುವುದಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆಂದು ಪಟ್ಟಭದ್ರರು ಹೋರಾಟ ಮಾಡುತ್ತಾರೆ. ಅವರಿಗೆ ಖುಷಿಪಡಲು ಅವಕಾಶ ನೀಡುವಂತೆ ಸರಕಾರ ನಿರಧಾರ ತೆಗೆದುಕೊಳ್ಳುತ್ತದೆ. ತಕ್ಷಣ ಇಂತಹ ಆಟವನ್ನು ಕೈ ಬಿಡಬೇಕು. ಸುವ್ರಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ದೀಪಕ್ ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button