Latest

ಪುಷ್ಕರಣಿ ಪೂಜಾರಿ ರಂಗಪ್ರವೇಶ

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಉಡುಪಿ ಮೂಲದ ಪುಷ್ಕರಣಿ ಪಿ. ಪೂಜಾರಿ ಇತ್ತೀಚೆಗೆ ಬೆಳಗಾವಿಯ ಕೆಎಲ್ಇ ಜೀರಗೆ ಸಭಾಭವನದಲ್ಲಿ ರಂಗಪ್ರವೇಶ ಮಾಡಿದ್ದಾರೆ. 

ಪುಷ್ಕರಣಿ ರವಿ ನೃತ್ಯಾಲಯ ಕಲಾಮಂದಿರದ ನಾಟ್ಯ ವಿದ್ವಾನ್ ಟಿ.ರವೀಂದ್ರ ಶರ್ಮ ಮತ್ತು ವಿದೂಷಿ ಧನ್ಯಶ್ರೀ ಚಕ್ರಪಾಣಿ ಶಿಷ್ಯೆಯಾಗಿರುವ  ಪುಷ್ಕರಣಿ ಪ್ರಕಾಶ ಪೂಜಾರಿ ಮತ್ತು ಮಲ್ಲಿಕಾ ಪ್ರಕಾಶ ಅವರ ಪುತ್ರಿ. ಹಾಲಿ ಬೆಳಗಾವಿಯ ಶಿವಬಸವನಗರದ ನಿವಾಸಿ.

  ನೂಪುರ ಕಲಾವಿದರೂ, ಮೈಸೂರಿನ ಸಾಂಸ್ಕೃತಿಕ ಟ್ರಸ್ಟ್ ನ ನಿರ್ದೇಶಕರೂ ಆಗಿರುವ ಪ್ರೊ.ಕೆ.ರಾಮಮೂರ್ತಿ ರಾವ್ ,  ಸೇಂಟ್ ಮೇರಿಸ್ ಹೈಸ್ಕೂಲ್ ಮುಖ್ಯಾಧ್ಯಾಪಕ ಪಿ.ಪಿ.ಆಳ್ವಾರೀಸ್, ರೋಟರಿ ಕ್ಲಬ್ ಮಾಜಿ ಗವರ್ನರ್ ಅವಿನಾಶ ಪೋತದಾರ, ಡೆಕ್ಕನ್ ಮೆಡಿಕಲ್ ಸೆಂಟರ್ ನ ಡಾ.ರಮೇಶ ದೊಡ್ಡಣ್ಣವರ್, ಹೊಟೆಲ್ ಉದ್ಯಮಿಗಳಾದ ವಿಠ್ಠಲ ಹೆಗಡೆ, ವಿಜಯ ಸಾಲಿಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಟಿ.ರವೀಂದ್ರ ಶರ್ಮಾ ಮತ್ತು ಧನ್ಯಶ್ರೀ ಚಕ್ರಪಾಣಿ ಸರಳಾಯ ನಟುವಾಂಗ,  ರೋಹಿತ್ ಭಟ್ ಉಪ್ಪೂರು ಹಾಡುಗಾರಿಕೆ, ವಿ.ಆರ್.ಚಂದ್ರಶೇಖರ ಮೃದಂಗ, ಜಯರಾಮ ಕಿಕ್ಕೇರಿ ಕೊಳಲು, ಅನಿರುದ್ಧ ನಾಡಿಗ್ ವಯೋಲಿನ್ ನುಡಿಸಿದರು.

ಪಾರ್ಶ್ವನಾಥ ಉಪಾಧ್ಯೆ ಕಾರ್ಯಕ್ರಮ ನಿರೂಪಿಸಿದರು. ಶೃತಿ ಆರ್.ವಂದಿಸಿದರು.   

Related Articles

Back to top button